• Home  
  • ಕಟಪಾಡಿ ; ಮಳೆಯಿಂದಾಗಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ನೇಮ ರದ್ದು
- Uncategorised - ಧಾರ್ಮಿಕ

ಕಟಪಾಡಿ ; ಮಳೆಯಿಂದಾಗಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ನೇಮ ರದ್ದು

Share: ಕಟಪಾಡಿ ; ಮಳೆಯಿಂದಾಗಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ನೇಮ ರದ್ದು ಕಟಪಾಡಿ ಏಣಗುಡ್ಡೆ ಗ್ರಾಮದ ಫಾರೆಸ್ಟ್‌ ಗೇಟ್ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದ ವೇಳೆ ಶುಕ್ರವಾರ ಮುಂಜಾನೆ ದಿಢೀರ್ ಮಳೆ ಸುರಿದ ಕಾರಣ ನೇಮೋತ್ಸವಕ್ಕೆ ತಡೆಯಾಗಿದೆ. ಉದ್ಯಾವರ ನದಿಯ ಪಕ್ಕದಲ್ಲಿರುವ ಈ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ತನ್ನಿಮಾನಿಗ ನೇಮೋತ್ಸವ ನಡೆಯುತ್ತಿದ್ದ ವೇಳೆಯೇ ಮಳೆ ಬಂದು ವಕ್ಕರಿಸಿದ್ದರಿಂದ ಮಳೆಯಲ್ಲೇ ಕೆಲಕಾಲ ಕೋಲ ನಡೆಯಿತು. ಇನ್ನೂ ಜೋರಾಗಿ ಮಳೆ ಸುರಿದು ತಗ್ಗುಪ್ರದೇಶದಲ್ಲಿದ್ದ ಕೋಲ ಚಪ್ಪರದೊಳಗೆ ನೀರು ನುಗ್ಗಿದ್ದರಿಂದ ಕೋಲ ನೋಡುತ್ತಿದ್ದವರೆಲ್ಲಾ […]

ಕಟಪಾಡಿ ಏಣಗುಡ್ಡೆ ಗ್ರಾಮದ ಫಾರೆಸ್ಟ್‌ ಗೇಟ್ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದ ವೇಳೆ ಶುಕ್ರವಾರ ಮುಂಜಾನೆ ದಿಢೀರ್ ಮಳೆ ಸುರಿದ ಕಾರಣ ನೇಮೋತ್ಸವಕ್ಕೆ ತಡೆಯಾಗಿದೆ.

ಉದ್ಯಾವರ ನದಿಯ ಪಕ್ಕದಲ್ಲಿರುವ ಈ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ತನ್ನಿಮಾನಿಗ ನೇಮೋತ್ಸವ ನಡೆಯುತ್ತಿದ್ದ ವೇಳೆಯೇ ಮಳೆ ಬಂದು ವಕ್ಕರಿಸಿದ್ದರಿಂದ ಮಳೆಯಲ್ಲೇ ಕೆಲಕಾಲ ಕೋಲ ನಡೆಯಿತು. ಇನ್ನೂ ಜೋರಾಗಿ ಮಳೆ ಸುರಿದು ತಗ್ಗುಪ್ರದೇಶದಲ್ಲಿದ್ದ ಕೋಲ ಚಪ್ಪರದೊಳಗೆ ನೀರು ನುಗ್ಗಿದ್ದರಿಂದ ಕೋಲ ನೋಡುತ್ತಿದ್ದವರೆಲ್ಲಾ ಮಳೆಯಿಂದ ರಕ್ಷಿಸಿಕೊಳ್ಳಲು ತೆರಳಿದರು. ಕಮಿಟಿಯವರು ಕೋಲದವರು ಮತ್ತು ಸೇವಕರು ಮಾತ್ರ ಉಳಿದಿದ್ದರು. ಮಳೆ ನೀರು ತುಂಬಿಕೊಂಡು ಕೆಸರಾದ ಕಾರಣ ಶುಕ್ರವಾರ ನಡೆಯಬೇಕಿದ್ದ ಇತರ ಪರಿವಾರ ದೈವಗಳ ನೇಮೋತ್ಸವ ನಡೆಸಲು ಸಾಧ್ಯವಾಗದೆ ಪರಿವಾರ ದೈವಗಳ ನೇಮೋತ್ಸವ ಮುಂದೂಡಲಾಗಿದೆ ಎಂದು ಸಮಿತಿಯ ಮುಖ್ಯಸ್ಥರ ಪ್ರಕಟನೆ ತಿಳಿಸಿದೆ.

ಮಳೆಯಲ್ಲಿ ನೇಮೋತ್ಸವ ನಡೆಯುತ್ತಿದ್ದ ದೃಷ್ಯ ಈಗ ವೈರಲ್‌ ಆಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.