ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಅಧ್ಯಕ್ಷರಾಗಿ ವಿಜಯ್ ಕುಮಾರ್ ಉದ್ಯಾವರ ಮತ್ತು ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋ ಅವಿರೋಧ ಆಯ್ಕೆ
(Katapadi) ಕಟಪಾಡಿ: ಕಟಪಾಡಿ ಸಹಕಾರಿ ವ್ಯವಸಾಯಿಕಾ ಸೇವಾ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಇಂದು ಬೆಳಿಗ್ಗೆ ಕಟಪಾಡಿ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಜಯಂತಿ ಎಸ್ ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದರು.
ಅಧ್ಯಕ್ಷರಾಗಿ ಮೂರನೇ ಬಾರಿಗೆ ವಿಜಯ್ ಕುಮಾರ್ ಉದ್ಯಾವರ ಹಾಗೂ ಉಪಾಧ್ಯಕ್ಷರಾಗಿ ಬ್ಲಾಂಚ್ ಕಾರ್ನಲಿಯೋರವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಇನ್ನುಳಿದಂತೆ ನಿರ್ದೇಶಕರಾಗಿ ರವಿಕುಮಾರ್ ಉದ್ಯಾವರ, ಅಶೋಕ್ ರಾವ್ ಕಟಪಾಡಿ, ಕವಿತಾ ಸುವರ್ಣ, ತ್ರಿವೇಣಿ, ಶಂಕರ್, ಮುರಳೀಧರ ಪೈ, ಯೋಗೀಶ್ ಮಟ್ಟು, ಗೋಪಾಲಕೃಷ್ಣ ರಾವ್, ಪವಿತ್ರ ಶೆಟ್ಟಿ ಮತ್ತುಇಂದು ಶೇಖರ ಸುವರ್ಣ ಆಯ್ಕೆಯಾಗಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಕಾಪು ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

