ಕಟಪಾಡಿ ಸ್ವಸ್ತಿಕ್ ಕಲಾ ಸಂಘದ “ಕಲೋತ್ಸವ-2025″ಕ್ಕೆ ಚಾಲನೆ
(Katapadi) ಕಟಪಾಡಿ: ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸ್ವಸ್ತಿಕ್ ಕಲಾಸಂಘದ ಮೂಲಕ ತರಬೇತಿ ನೀಡಿ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಕಟಪಾಡಿ ಸ್ವಸ್ತಿಕ್ ಕಲಾ ಸಂಘದ ವತಿಯಿಂದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪುಣ್ಯ ಸ್ಮರಣೆಯೊಂದಿಗೆ ನಡೆದ 22ನೇ ವಾರ್ಷಿಕೋತ್ಸವ “ಕಲೋತ್ಸವ-2025” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಸತ್ಯೇಂದ್ರ ಪೈ, ಕಟಪಾಡಿಯ ವೈದ್ಯ ಡಾ. ಯು.ಕೆ. ಶೆಟ್ಟಿ, ಉದ್ಯಮಿ ಕೃಷ್ಣ ಕೋಟೆ, ಅಶೋಕ್ ರಾವ್, ತುಳಸಿ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸ್ವಸ್ತಿಕ್ ಕಲಾ ಸಂಘದ ಅಧ್ಯಕ್ಷ ರಮೇಶ್ ಕೋಟ್ಯಾನ್ ಸ್ವಾಗತಿಸಿದರು. ಸಂಗೀತ ಕೋಟ್ಯಾನ್ ನಿರೂಪಿಸಿದರು.
ಸುಕುಮಾರ್, ಉಮೇಶ್, ವಿಜಯ ಕುಮಾರ್, ಆಶಾ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

