
ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ
(Katapadi) ಕಟಪಾಡಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ದಿನೇ ದಿನೇ ವಾಹನ ನಿಬಿಢತೆ ಹೆಚ್ಚುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕಟಪಾಡಿ ಇನ್ವೆಂಜರ್ ಫೌಂಡೇಶನ್, ರೋಟರಿ ಕ್ಲಬ್ ವತಿಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಯುವ ಕಲಾವಿದ ರಂಜೀತ್ ಕೋಟ್ಯಾನ್ ಕಟಪಾಡಿ ಯಮಧರ್ಮನ ವೇಷದಲ್ಲಿ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ, ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ರೋಟರಿ ಸಂಸ್ಥೆಯ ರಸ್ತೆ ಸುರಕ್ಷತಾ ಜಿಲ್ಲಾ ಚಯರ್ಮೆನ್ ಕೆ. ಸತ್ಯೇಂದ್ರ ಪೈ ಅವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ, ಕಿರುಚಿತ್ರ, ಕೈಪಿಡಿ ರಚನೆ ನಡೆಸಲು ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಸಾರ್ವಜನಿಕರಿಂದ ಹಾಗೂ ಪೊಲೀಸ್ ಇಲಾಖೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಯಿತು.
ಚಿತ್ರ ನಿರ್ದೇಶಕ ರಝಾಕ್ ಪುತ್ತೂರು, ಛಾಯಾಗ್ರಾಹಕ ಮೋಹನ್ ಪಡ್ರೆ, ಗೌರಿ ನಾಗೇಶ್ ಕೃಷ್ಣ, ಜಯಕರ ಕುಂದರ್, ಪ್ರಕಾಶ್ ಸುವರ್ಣ ಕಟಪಾಡಿ, ಕೆ.ನಾಗೇಶ್ ಕಾಮತ್ ಕಟಪಾಡಿ, ಗಣೇಶ್ ಕಿಣಿ ಕಟಪಾಡಿ, ಪದ್ಮನಾಭ ಆರ್ ಕೋಟ್ಯಾನ್, ಯಶಸ್ ಪಿ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿ, ಕಟಪಾಡಿ ಠಾಣಾಧಿಕಾರಿ ದಯಾನಂದ ಮತ್ತಿತರ ಸಿಬಂದಿಗಳು ಸಹಕರಿಸಿದರು.

