• Home  
  • ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್‌ ಆಳ್ವ : (Sports resources on the coast need to be utilized properly: Mohan Alva)
- ಕ್ರೀಡೆ - ಸಂಘ, ಸಂಸ್ಥೆಗಳು

ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್‌ ಆಳ್ವ : (Sports resources on the coast need to be utilized properly: Mohan Alva)

Share: ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್‌ ಆಳ್ವ ಪಡುಬಿದ್ರಿ ಅಂತಾರಾಜ್ಯ ಬಂಟ ಕ್ರೀಡೋತ್ಸವ ಎಮ್‌ಆರ್‌ಜಿ ಟ್ರೋಫಿ ಸಮಾರೋಪ    (Pdubidri) ಪಡುಬಿದ್ರಿ : ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಪಡೆಯನ್ನು ಹೊಂದಿರುವ ಭಾರತ ಕ್ರೀಡೆಯಲ್ಲಿ ಏನು ಬೇಕಾದರೂ ಸಾಸಬಹುದು. ಅದಕ್ಕೆ ಬೇಕಾದ ಸಂಪನ್ಮೂಲಗಳು ಕರಾವಳಿಯಲ್ಲಿ ಸಾಕಷ್ಟಿದೆ. ಅದನ್ನು ಸೂಕ್ತವಾಗಿ ಬಳಸಬೇಕಾಗಿದೆ. ಒಲಿಂಪಿಕ್‌ ಚಿನ್ನ ಗಳಿಸಲಾರದಕ್ಕೆ ಆತ್ಮಾವಲೋಕನದ ಅಗತ್ಯವಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು. ಪಡುಬಿದ್ರಿಯ ದಿ. […]

ಕರಾವಳಿಯಲ್ಲಿ ಕ್ರೀಡಾ ಸಂಪನ್ಮೂಲಗಳ ಸದ್ಬಳಕೆಯಾಗಬೇಕಿದೆ : ಮೋಹನ್‌ ಆಳ್ವ

ಪಡುಬಿದ್ರಿ ಅಂತಾರಾಜ್ಯ ಬಂಟ ಕ್ರೀಡೋತ್ಸವ ಎಮ್‌ಆರ್‌ಜಿ ಟ್ರೋಫಿ ಸಮಾರೋಪ  

 (Pdubidri) ಪಡುಬಿದ್ರಿ : ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಪಡೆಯನ್ನು ಹೊಂದಿರುವ ಭಾರತ ಕ್ರೀಡೆಯಲ್ಲಿ ಏನು ಬೇಕಾದರೂ ಸಾಸಬಹುದು. ಅದಕ್ಕೆ ಬೇಕಾದ ಸಂಪನ್ಮೂಲಗಳು ಕರಾವಳಿಯಲ್ಲಿ ಸಾಕಷ್ಟಿದೆ. ಅದನ್ನು ಸೂಕ್ತವಾಗಿ ಬಳಸಬೇಕಾಗಿದೆ. ಒಲಿಂಪಿಕ್‌ ಚಿನ್ನ ಗಳಿಸಲಾರದಕ್ಕೆ ಆತ್ಮಾವಲೋಕನದ ಅಗತ್ಯವಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.

ಪಡುಬಿದ್ರಿಯ ದಿ. ರಮೇಶ್ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಪಡುಬಿದ್ರಿ ಬಂಟರ ಸಂಘ ಮತ್ತು ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ನಡೆದ ಅಂತಾರಾಜ್ಯ ಬಂಟ ಕ್ರೀಡೋತ್ಸವ ಎಮ್‌ಆರ್‌ಜಿ ಟ್ರೋಫಿ-೨೦೨೪ರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಗೈದರು.

ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಉದ್ಯಮ ಸಂಸ್ಥೆಯ ಚೇರ್ಮೆನ್ ಹಾಗೂ ಆಡಳಿತ ನಿರ್ದೇಶಕ ಡಾ. ಪ್ರಕಾಶ್ ಕೆ. ಶೆಟ್ಟಿ ಅವರು ಮಾತನಾಡಿ, ಕ್ರೀಡೋತ್ಸವ ಹೆಮ್ಮೆ ತಂದಿದೆ. ಗ್ರಾಮೀಣ ಮಟ್ಟದಲ್ಲಿನ ಈ ಬಂಟರ ಸಂಘವು ಗೈದಿರುವ ಅಂತಾರಾಷ್ಟ್ರೀಯ ಮಟ್ಟದ ಆಯೋಜನೆ ಇದಾಗಿದೆ. ಮುಂದೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳಾಗಬೇಕಿದೆ ಎಂದು ಹೇಳಿದರು.

ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕುರ್ಕಿಲ್‌ಬೆಟ್ಟು, ಸಾಯಿರಾಧ ಮನೋಹರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಚಲನಚಿತ್ರ ನಟ ಶೋಧನ್ ಶೆಟ್ಟಿರವರನ್ನು ಸನ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಂಟರ ಸಂಘವು ಜಾತ್ಯಾತೀತ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು ನಾವು ಎಂಬುದನ್ನು ಮರೆಯದಿರೋಣ. ಸಂಕಲ್ಪ ಶುದ್ಧಿ ಇದ್ದಲ್ಲಿ ಸಂಕಲ್ಪ ಸಿದ್ಧಿ ಸಾಧ್ಯ ಎಂದರು.

ಗೌರವಾಭಿನಂದನೆ: ಬೆಂಗಳೂರಿನ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಡಾ. ಕೆ. ಪ್ರಕಾಶ್ ಶೆಟ್ಟಿ ಅವರನ್ನು ಯುವ ಬಂಟ ಕ್ರೀಡಾಳುಗಳ ಸಂಪ್ರೀತಿಯ ಗೌರವಾಭಿನಂದನೆಯೊಂದಿಗೆ ಗೌರವಿಸಲಾಯಿತು. ಹಾಗೂ ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರದಾನ: ಅಂತರಾಷ್ಟ್ರೀಯ  ಕ್ರೀಡಾಪಟು ಎರ್ಮಾಳು ರೋಹಿತ್ ಹೆಗ್ಡೆ, ಯುವ ಕಂಬಳ ಸಾಧಕ ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟುಬೀಡು ಹಾಗೂ ಅಂತರಾಷ್ಟ್ರೀಯ ಈಜುಪಟು ನೈಶಾ ಶೆಟ್ಟಿ ಕ್ರೀಡೆ, ಕಂಬಳ ಮತ್ತು ಈಜುಗಾರಿಕೆ ಕ್ಷೇತ್ರದ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಬಂಟ ಕ್ರೀಡಾರತ್ನ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.

ಸನ್ಮಾನ: ಸ್ಥಳದಾನಿ ಕರುಣಾಕರ ಪೂಜಾರಿ, ಕ್ರೀಡಾ ಸಂಘಟಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ಸೂಡ ಅವರನ್ನು ಸಮ್ಮಾನಿಸಲಾಯಿತು. ಭವಿಷ್ ಶೆಟ್ಟಿ ಅವರಿಗೆ ಪ್ರೋತ್ಸಾಹಕ ಸಹಾಯ ಧನವನ್ನೂ ವಿತರಿಸಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಶಶಿಧರ ಶೆಟ್ಟಿ ಎರ್ಮಾಳು ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಂಎಲ್‌ಲ್ಸಿಗಳಾದ ಕಿಶೋರ್ ಶೆಟ್ಟಿ ಮತ್ತು ಐವನ್ ಡಿಸೋಜ, ಮುಂಬೆ` ಹೇರಂಭ ಇಂಡಸ್ಟ್ರೀಸ್ ಸಿಎಮ್‌ಡಿ ಕನ್ಯಾನ ಸದಾಶಿವ ಶೆಟ್ಟಿ, ಭಾಗವತ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಕೆ.ಎಂ. ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಅದಾನಿ-ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ, ಆಸ್ಪೆನ್ ಇನ್ಫ್ರಾ ಜಿಎಂ ಅಶೋಕ್ ಕುಮಾರ್ ಶೆಟ್ಟಿ, ಭಾಸ್ಕರ ಶೆಟ್ಟಿ ಯುಎಸ್‌ಎ, ವೀಣಾ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಉಪೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗುಂಡ್ಲಾಡಿ, ಹರಿಪ್ರಸಾದ್ ರೈ, ಚಂದ್ರಹಾಸ ಶೆಟ್ಟಿ ಪುಚ್ಚೊಟ್ಟುಬೀಡು, ಸೀತಾರಾಮ ಶೆಟ್ಟಿ ಪುಚ್ಚೊಟ್ಟುಬೀಡು, ನವೀನ್‌ಚಂದ್ರ ಜೆ. ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ, ಸಹ ಸಂಚಾಲಕಿ ಶರ್ಮಿಳಾ ಶೆಟ್ಟಿ, ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ ಪಲ್ಲವಿ ಮತ್ತು ಶ್ರೀನಾಥ್ ಹೆಗ್ಡೆ, ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು,  ಶೇಖರ ಶೆಟ್ಟಿ ತೆಳ್ಳಾರು ಉಪಸ್ಥಿತರಿದ್ದರು.

ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು.

ಜಯ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಕಾರಿ ರವಿ ಶೆಟ್ಟಿ ಗುಂಡ್ಲಾಡಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.