ಕಾಂಗ್ರೆಸ್‌ನಿಂದ ಉಡುಪಿಗೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಗುಮಾನಿ, ಕಾಂಗ್ರೆಸ್ ಕಾರ್ಯಕರ್ತರ “ಗೋ ಬ್ಯಾಕ್ ಜೆಪಿ’ ಅಭಿಯಾನ
ಉಡುಪಿ: ಉಡುಪಿಯಲ್ಲಿ ಲೋಕಾಸಭೆ ಚುನಾವಣೆ ಬಿಸಿ ಶುರುವಾಗಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಪೈಪೋಟಿ ಚುರುಕಾಗಿದೆ.
ಈ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಹಿಂದೆ ಕಾಂಗ್ರೆಸ್‌ನಲ್ಲಿದ್ದ, ಈಗ ಬಿಜೆಪಿ ಪಕ್ಷದಲ್ಲಿರುವ ಹಿಂದುಳಿದ ಅಯೋಗದ ಅಧ್ಯಕ್ಷರಾದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರ (EX Minister Jayaprakash Hegde) ಹೆಸರು ಮುಂಚೂಣಿಯಲ್ಲಿದೆ.
ಈಗ ಬಿಜೆಪಿಯಲ್ಲಿರುವವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಯಾಕೆ? ಕಷ್ಟಕಾಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವವರಿಗೆ ಟಿಕೆಟ್ ಯಾಕೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ಗೋ ಬ್ಯಾಕ್ ಜೆಪಿ” ಅಭಿಯಾನ ಪ್ರಾರಂಭವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಗೋಬ್ಯಾಕ್ ಹೆಗ್ಡೆ ಎನ್ನುವ ಅಭಿಯಾನ ಶುರುವಾಗಿದೆ. ಈ ಅಭಿಯಾನ ಎಷ್ಟರ ಮಟ್ಟಿಗೆ ಫಲದಾಯಕ ಎಂದು ಕಾದು ನೋಡಬೇಕಿದೆ.

