• Home  
  •   ಕಾಂಗ್ರೆಸ್‌ನ ಹಿರಿಯ ನೇತಾರ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಮಣಿಪಾಲ ನಿಧನ (Congress leader, social worker Abdul Rahamam Manipal no more)
- ಕರಾವಳಿ

  ಕಾಂಗ್ರೆಸ್‌ನ ಹಿರಿಯ ನೇತಾರ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಮಣಿಪಾಲ ನಿಧನ (Congress leader, social worker Abdul Rahamam Manipal no more)

Share:   ಕಾಂಗ್ರೆಸ್‌ನ ಹಿರಿಯ ನೇತಾರ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಮಣಿಪಾಲ ನಿಧನ  ಉಡುಪಿ, ಜ.16: ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ  ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರೆಹಮಾನ್ ಮಣಿಪಾಲ(77) ಹೃದಯಾಘಾತದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯಾಗಿ, ಮಹಾರಾಷ್ಟ್ರ ಅಪೆಕ್ಸ್ ಸಂಸ್ಥೆಯಲ್ಲಿ ಮೆನೇಜರ್ ಹಾಗೂ ಮಣಿಪಾಲ ಗ್ರೂಪ್‌ನಲ್ಲಿ ಡೆವಲಪ್‌ಮೆಂಟ್ ಮೆನೇಜರ್ ಆಗಿ ನಿವೃತ್ತಿ ಯಾಗಿದ್ದರು.     ಕರ್ನಾಟಕ ಬ್ಯಾರಿ […]

  ಕಾಂಗ್ರೆಸ್‌ನ ಹಿರಿಯ ನೇತಾರ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಮಣಿಪಾಲ ನಿಧನ

 ಉಡುಪಿ, ಜ.16: ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ  ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರೆಹಮಾನ್ ಮಣಿಪಾಲ(77) ಹೃದಯಾಘಾತದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯಾಗಿ, ಮಹಾರಾಷ್ಟ್ರ ಅಪೆಕ್ಸ್ ಸಂಸ್ಥೆಯಲ್ಲಿ ಮೆನೇಜರ್ ಹಾಗೂ ಮಣಿಪಾಲ ಗ್ರೂಪ್‌ನಲ್ಲಿ ಡೆವಲಪ್‌ಮೆಂಟ್ ಮೆನೇಜರ್ ಆಗಿ ನಿವೃತ್ತಿ ಯಾಗಿದ್ದರು.  

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರೋಟರಿ ಕ್ಲಬ್ ಉಡುಪಿ – ಮಣಿಪಾಲ ಅಧ್ಯಕ್ಷರಾಗಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಸ್ಥಾಪಕ ಸದಸ್ಯರಾಗಿ, ಲಯನ್ಸ್ ಕ್ಲಬ್ ಸದಸ್ಯರಾಗಿ ಅಬ್ದುಲ್‌ ರಹಮಾನ್‌ರವರು ಸೇವೆ ಸಲ್ಲಿಸಿದ್ದರು. ಸಂತೋಷ್‌ ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದು, ಶಿವಮೊಗ್ಗದಲ್ಲಿ ಗಣಿತ ಶಿಕ್ಷಣರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

 ಅಬ್ದುಲ್‌ ರಹಮಾನ್‌ರವರು ಪತ್ನಿ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ:

ಉಡುಪಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರೂ, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರಹ್ಮಾನ್ ರವರ ಅಕಾಲ ನಿಧನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ (MP Moidinabba) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಓರ್ವ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡಿದೆ ಎಂದು ಮೊಯಿದಿನಬ್ಬ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.