• Home  
  • ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ : ಎಸ್‌ ಐ ರಾಘವೇಂದ್ರ (Parents should be aware of their children: SI Raghavendra)
- ಕರಾವಳಿ

ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ : ಎಸ್‌ ಐ ರಾಘವೇಂದ್ರ (Parents should be aware of their children: SI Raghavendra)

Share: ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ : ಎಸ್‌ ಐ ರಾಘವೇಂದ್ರ  (Udupi) ಉಡುಪಿ: ಯುವಕರು ಹೆಚ್ಚಾಗಿ ಮದ್ಯವ್ಯಸನ  ಡ್ರಗ್ಸ್‌ ಗೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ ಇನ್ನಷ್ಟು ಹಾಳಾಗುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ ಎಂದು ಮಣಿಪಾಲ ಪೋಲೀಸ್‌ ಠಾಣೆಯ ಠಾಣಾಧಿಕಾರಿ ರಾಘವೇಂದ್ರ (Manipal police Station SI Raghavendra) ಹೇಳಿದ್ದಾರೆ. ಅವರು ಉಡುಪಿಯ ಡಾನ್‌ ಬಾಸ್ಕೋ ಹಾಲ್‌ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ವತಿಯಿಂದ ಹಮ್ಮಿಕೊಂಡ ಸುದೃಢ ಕುಟುಂಬ, ಸುಭದ್ರ ಸಮಾಜ ಎಂಬ ವಿಷಯದ […]

ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ : ಎಸ್‌ ಐ ರಾಘವೇಂದ್ರ

 (Udupi) ಉಡುಪಿ: ಯುವಕರು ಹೆಚ್ಚಾಗಿ ಮದ್ಯವ್ಯಸನ  ಡ್ರಗ್ಸ್‌ ಗೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ ಇನ್ನಷ್ಟು ಹಾಳಾಗುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ ಎಂದು ಮಣಿಪಾಲ ಪೋಲೀಸ್‌ ಠಾಣೆಯ ಠಾಣಾಧಿಕಾರಿ ರಾಘವೇಂದ್ರ (Manipal police Station SI Raghavendra) ಹೇಳಿದ್ದಾರೆ.

ಅವರು ಉಡುಪಿಯ ಡಾನ್‌ ಬಾಸ್ಕೋ ಹಾಲ್‌ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ವತಿಯಿಂದ ಹಮ್ಮಿಕೊಂಡ ಸುದೃಢ ಕುಟುಂಬ, ಸುಭದ್ರ ಸಮಾಜ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

 ಜನರು ಸೈಬರ್‌ ಕ್ರೈ, ಆನ್‌ ಲೈನ್‌ ಗೇಮಿಂಗ್‌ ಗೆ ಒಳಗಾಗಿ ಪ್ರತಿ ದಿನ ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದಕ್ಕೆ ನಾವುಗಳು ಜಾಗೃತರಾಗಬೇಕು ಎಂದು ಹೇಳಿದರು.

  ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸ್ಪಡುತ್ತಿರುವವರು ವೃದ್ದರಾದ ತಂದೆ ತಾಯಂದಿರು – ಮಹಮ್ಮದ್‌ ಕುಂಞಿ (Mohd Kunji)

ಜಮಾಅತೆ ಇಸ್ಲಾಮೀ ಹಿಂದ್‌ ರಾಜ್ಯ ಕಾರ್ಯದರ್ಶಿ ಮಹಮ್ಮದ್‌ ಕುಂಞಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುವವರು ಯಾರಾದರು ಇದ್ದರೆ, ಅದು ವೃದ್ದರಾದ ತಂದೆ ತಾಯಿಗಳು. ಕುಟುಂಬ ಸಂಬಂಧಗಳು ಶಿಥಿತವಾಗುತ್ತಿದೆ. ಬೆಳೆದು ನಿಂತ ಮಕ್ಕಳು ವೃದ್ಧರಾದ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಅಟ್ಟುತ್ತಿದ್ದಾರೆ. ಪಾಶ್ಯಾತ್ಯ ಸಂಸ್ಖೃತಿಗಳು ನಮ್ಮನ್ನು ಆವರಿಸುತ್ತಿದೆ. ಇಂದಿನ ಹೊಸ ತಲೆ ಮಾರಿಗೆ ಇಷ್ಟವಿಲ್ಲದ ಒಂದು ಸ್ಥಳ ಇದ್ದರೆ ಅದು ಅವರ ಮನೆ ಆಗಿದೆ ಎಂದು ಹೇಳಿದರು.

   ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಕೌಟುಂಬಿಕ ವ್ಯವಸ್ಥಗೆ ಬಹಳ ಪ್ರಾಮುಖ್ಯತೆ ಇದೆ. ಎಲ್ಲೂ ಸಿಗದಂತಹ ಸೇವೆಗಳು ಕುಟುಂಬಲ್ಲಿ ನಮಗೆ ಸಿಗುತ್ತದೆ.  ಬ್ರಹ್ಮಾಂಡ ಉಳಿಯಬೇಕಾದರೆ ಯಾವ ರೀತಿ ಸೂರ್ಯ, ಚಂದ್ರ, ನಕ್ಷತ್ರ, ಮಳೆ ಗಾಳಿ ಮುಖ್ಯವೋ ಅದೇ ರೀತಿ ಈ ಸಮಾಜ ಉಳಿಯಬೇಕಾದರೆ ಕುಟುಂಬ ಇರಬೇಕು ಕುಟುಂಬ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ. ಕುಟುಂಬ ಸಂಬಂಧವನ್ನು ಹಾಳು ಮಾಡಿದವನನ್ನು ಪ್ರವಾದಿ ಮುಹಮ್ಮದರು ಮಸೀದಿಯಿಂದಲೇ ಓಡಿಸಿದ್ದರು ಎಂದು ಹೇಳಿದರು.

 ಮುಖ್ಯ ಅಥಿತಿಯಾಗಿ ಭಾಗವಹಿಸಿದ ಡಾ. ಎ ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋ ವೈದ್ಯರಾದ ಡಾ. ಮಾನಸ್‌ (DR Manasa) ರವರು ಮಾತನಾಡಿ, ಪ್ರತಿದಿನ ಒಂದಲ್ಲ ಒಂದು ಸಮಸ್ಯೆಗಳನ್ನು ಹಿಡಿದುಕೊಂಡು ನಮ್ಮ ಆಸ್ಪತ್ರೆಗೆ ರೋಗಿಗಳು ಬರುತ್ತಲೇ ಇರುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಬಹಳ ಜನರು ಬಳಲುತ್ತಿದ್ದಾರೆ. ಈ ಮೊಬೈಲ್‌ ಬಂದ ನಂತರದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ ಹೊರತು, ಕಡಿಮೆ ಆಗಿಲ್ಲ. ಹಲವು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರ ಎಂದು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಂತವರಿಗೆ ಸರಿಯಾದ ಮನೋ ವೈದ್ಯರ ಸಮಾಲೋಚನೆ ಅಗತ್ಯವಿದೆ ಎಂದು ಹೇಳಿದರು.

  ಸುಗಮ್ಯ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಜನೇಟ್‌ ಬರ್ಬೋಝ (Janet Barboza) ಮಾತನಾಡಿ, ಕುಟುಂಬ ಸಂಬಂಧಗಳು ಸುದೃಢವಾಗಿದ್ದರೆ ಸಮಾಜ ಕೂಡ ಸುಭಧ್ರವಾಗಿರುತ್ತದೆ. ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರೆ ಕುಟುಂಬ ಸಂಬಂಧಗಳ ಜೊತೆಗೆ ಸಮಾಜಿಕ ಸಂಬಂಧಗಳು ಕೂಡ ಬಲಿಷ್ಠ ಆಗುತ್ತದೆ ಎಂದು ಹೇಳಿದರು.

ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್‌ (Vajida Tabassum)ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ಘಟಕದ ಅಧ್ಯಕ್ಷರಾದ ನಿಸಾರ್‌ ಅಹಮದ್‌ (Nisar Ahamed)ಪ್ರಾಸ್ತವಿಕವಾಗಿ ಮಾತನಾಡಿದರು.

  ಕಾರ್ಯಕ್ರಮದ ಸಂಯೋಜಕರಾದ ರಯೀಸ್‌ ಅಹಮದ್‌ ವಂದಿಸಿದರು.

  ಜಲಾಲುದ್ದಿನ್‌ ಹಿಂದ್‌ ಕಾರ್ಯಕ್ರಮ ನಿರೂಪಿಸಿದರು.

 ಈ ಸಂದರ್ಭ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ. ಬಿ ಬಿ ಹೆಗ್ಡೆ ಕಾಲೇಜಿನ ಉಪನ್ಯಾಸಕರಾದ ಕೆ ಸುಕುಮಾರ್‌ ಶೆಟ್ಟಿ, ದ್ವಿತೀಯ ಬಹುಮಾನ ಪಡೆದ ಯಶಸ್ವಿ ಟುಟೋರಿಯಲ್‌ ಪಿ ಯು ಕಾಲೇಜಿನ ಸೂರಜ್‌ ಮತ್ತು ತೃತಿಯ ಬಹುಮಾನ ಪಡೆದ ಪ್ಲವರ್‌ ಆಫ್‌ ಪ್ಯಾರಡೈಸ್‌ನ ಉಪನ್ಯಾಸಕಿ ಮರ್ಸೆಲ್ಲ ಡಿ ಸೋಜಾರವರನ್ನು  ಸನ್ಮಾನಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.