
ಕಾಪುವಿನಲ್ಲಿ ಅಂಡರ್ 15 ಓಪನ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್ 2025 ಉದ್ಘಾಟನೆ
(Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಅಂಡ್ ಎಜುಕೇಷನ್ ಟ್ರಸ್ಟ್ ಕಾಪು, ಹಳೇ ಮಾರಿಯಮ್ಮ ದೇವಸ್ಥಾನ ಕಾಪು, ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಪಾಂಗಾಳ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್ 2025ನೇ ಉದ್ಘಾಟನಾ ಕಾರ್ಯಕ್ರಮ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾ ಭವನದಲ್ಲಿ ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸೀತಾರಾಮ ಭಟ್ ಅಧ್ಯಕ್ಷರು ದಂಡತೀರ್ಥ ಪ್ರತಿಷ್ಠಾನ (ರಿ) ಉಳಿಯರಗೊಳಿ ಹಾಗೂ ಟಿ ಎನ್ ಮಧುಕರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಚೆಸ್ ದಾಳವನ್ನು ಮುನ್ನಡೆಸುವ ಮೂಲಕ ಚಾಲನೆಯನ್ನು ನೀಡಿದರು.
ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗ್ರ್ಯಾಂಡ್ ಮಾಸ್ಟರ್ ವತಿಯಿಂದ ಉಚಿತ ತರಬೇತಿಯನ್ನು ನೀಡುತ್ತೇವೆ ಎಂದು ಮಧುಕರ್ ಹೇಳಿದರು.
ಅಧ್ಯಕ್ಷತೆಯನ್ನು ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾಂಗಳ ಆಸರೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಪೆನ್‌ವಿಲ್ ಸೋನ್ಸ್ (ರಿ.) ಪಾಂಗಳ, ಡಾ. ವ್ಯಾಸರಾಜ ತಂತ್ರಿ ಆಡಳಿತ ನಿರ್ದೇಶಕರು ಗಾಂಧಿ ಆಸ್ಪತ್ರೆ ಉಡುಪಿ, ಅಶೋಕ್ ಕುಮಾರ್ ಶೆಟ್ಟಿ ಮುಖ್ಯಸ್ಥರು ಅಸ್ಪೆನ್ ಪಡುಬಿದ್ರಿ, ರಮೇಶ್ ಕೋಟೆ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು, ನಾಗೇಶ ಕಾರಂತ್ ಕಾರ್ಯದರ್ಶಿ ಸಾಮ್ರಾಟ್ ಚೆಸ್ ಯುನಿಟ್ ಮಂಗಳೂರು, ಶ್ರೀಧರ ಶೆಣೈ ಮಾಜಿ ಆಡಳಿತ ಮೊಕ್ತೇಸರರು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಉಪಸ್ಥಿತರಿದ್ದರು.
ವಿವಿಧ ಜಿಲ್ಲೆಗಳಿಂದ ಒಟ್ಟು 235 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಓಪನ್ ಹಾಗೂ ಹುಡುಗಿಯರ ವಿಭಾಗದಲ್ಲಿ ಒಟ್ಟು 4 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.
ಮಾಸ್ಟರ್ ಮಧ್ವ ವ್ಯಾಸರಾಜ ತಂತ್ರಿ ಪ್ರಾರ್ಥಿಸಿದರು. ಸ್ಥಾಪಕ ಸಾಕ್ಷಾತ್ ಯು ಕೆ ಸ್ವಾಗತಿಸಿದರು. ಉಮಾನಾಥ ಕಾಪು ವಂದಿಸಿದರು. ನಿರ್ದೇಶಕಿ ಸೌಂದರ್ಯ ಯು ಕೆ ನಿರೂಪಿಸಿದರು.
