• Home  
  • ಕಾಪುವಿನಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ
- ಶಾಲಾ ಕಾಲೇಜು

ಕಾಪುವಿನಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ

Share: ಕಾಪುವಿನಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ ಸತತ ಏಳು ದಿನಗಳಕಾಲ ನಡೆದ ಸೇವಾ ಯೋಜನೆ (Kaup) ಕಾಪು: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆ (ಏನ್ ಎಸ್ ಎಸ್) ವಾರ್ಷಿಕ ವಿಶೇಷ ಶಿಬಿರ ಕಾಪುವಿನ ಮಹಾದೇವಿ ಪ್ರೌಢಶಾಲೆಯಲ್ಲಿ ಸಂಪನ್ನ ಗೊಂಡಿತು.   ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉದ್ಘಾಟನೆ ಗೊಂಡ ಶಿಬಿರ ಸತತ ಏಳು ದಿನಗಳ ಕಾಲ ನಡೆಯಿತು.   […]

(Kaup) ಕಾಪು: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆ (ಏನ್ ಎಸ್ ಎಸ್) ವಾರ್ಷಿಕ ವಿಶೇಷ ಶಿಬಿರ ಕಾಪುವಿನ ಮಹಾದೇವಿ ಪ್ರೌಢಶಾಲೆಯಲ್ಲಿ ಸಂಪನ್ನ ಗೊಂಡಿತು.

  ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉದ್ಘಾಟನೆ ಗೊಂಡ ಶಿಬಿರ ಸತತ ಏಳು ದಿನಗಳ ಕಾಲ ನಡೆಯಿತು.

  ಶಿಬಿರದಲ್ಲಿ ಭಾಗವಹಿಸಿದ 50 ವಿದ್ಯಾರ್ಥಿಗಳು ಮತ್ತು ಶಿಬಿರಧಿಕಾರಿ ಪರಮೇಶ್ವರ್ ಎಂ ಮೊಗವೀರ ನೇತೃತ್ವದಲ್ಲಿ ಕಾಪು ಬೀಚ್, ಕಾಪು ಪಟ್ಟಣದ ಪರಿಸರದಲ್ಲಿದ್ದ ಸುಮಾರು 10 ಟನ್‌ ನಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿ ವಿಲೇವಾರಿ ಮಾಡಲಾಯಿತು.

  ಮಕ್ಕಳ ವ್ಯಕ್ತಿತ್ವ ವಿಕಾಸ, ಯೋಗ, ಕಾನೂನು, ಪರಿಸರ ವಿಷಯಕ್ಕೆ ಸಂಭಂದಿಸಿದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

  ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ ಯವರು ಸಮಾರೋಪ ಭಾಷಣ ಮಾಡಿ ಶಿಬಿರಾರ್ಥಿಗಳ ಶ್ರಮದಾನವನ್ನು ಶ್ಲಾಘಿಸಿದರು.

  ಸಮಾರೋಪ ಸಮಾರಂಭ ದಲ್ಲಿ ಕಾಲೇಜು ಪ್ರಾಂಶುಪಾಲ ನಾಗರಾಜ, ಕಾಪು ಬೀಚ್ ಫ್ರೆಂಡ್ಸ್ ಅಧ್ಯಕ್ಷ ಚಂದ್ರಶೇಖರ ಬೀರ, ಮಾಧವ ಪಾಲನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ವಿದ್ವಾನ್ ಪ್ರಕಾಶ್ ಅಮ್ಮಣ್ಣಯ್ಯ, ಶಿಬಿರಾಧಿಕಾರಿ ಪರಮೇಶ್ವರ್ ಎಂ ಮೊಗವೀರ, ಲಕ್ಷ್ಮೀಕಾಂತ್ ಕಾಪು, ಮಧುಕರ್ ಅಂಚನ್, ಕಾಲೇಜಿನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

 ಕುಮಾರಿ ಸುಮಾ ಪ್ರಾರ್ಥನೆ ಮಾಡಿದರು. ಪರಮೇಶ್ವರ್ ಮೊಗವೀರ ಸ್ವಾಗತಿಸಿ, ವರದಿ ವಾಚನ ಮಾಡಿದರು. ಆಶಾ ನಿರೂಪಿಸಿದರು. ಲಕ್ಷೀಕಾಂತ್ ವಂದಿಸಿದರು.‌

Leave a comment

Your email address will not be published. Required fields are marked *

eMedia Kannada  @2025. All Rights Reserved.