ಕಾಪುವಿನ ಹೃದಯ ಭಾಗದಲ್ಲಿರುವ ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿಯಾದ ಘಟನೆ ಘಟಿಸಿದೆ.
ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರವಿವಾರ ಘಟನೆ ಸಂಭವಿಸಿದ್ದು ಬೈಕ್ ಗಳು ಸಂಪೂರ್ಣ ಮಣ್ಣಿನಡಿ ಹುದುಗಿದೆ. ಈ ಸಂದರ್ಭ ರಿಕ್ಷಾ ಮುಂದೆ ಚಲಿಸಿದ್ದು ಸ್ವಲ್ಪಮಟ್ಟಿನ ಹಾನಿಯಾಗಿದೆ
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

