• Home  
  • ಕಾಪುವಿನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ (12th International Yoga Day celebrated in Kaup)
- health - ದೇಶ-ವಿದೇಶ - ರಾಜಕೀಯ

ಕಾಪುವಿನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ (12th International Yoga Day celebrated in Kaup)

Share: ಕಾಪುವಿನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪು ಬಿಜೆಪಿ ಯುವ ಮೋರ್ಚಾ ಮಂಡಲ ನೇತೃತ್ವದಲ್ಲಿ ಯೋಗ ದಿನ ಆಚರಣೆ (Kaup) ಕಾಪು: ಕಾಪು ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ನೇತೃತ್ವದಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪುವಿನ ಓಶಿಯನ್ ಬೀಚ್ ರೆಸಾರ್ಟ್‌ ನಲ್ಲಿ ಭಾನುವಾರ ಬೆಳಿಗ್ಗೆ ನೆರವೇರಿತು.   “ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಉದ್ಘಾಟಿಸಿದರು.    ಅವರು ಮಾತನಾಡಿ, ಸುಮಾರು ಆರು ಸಾವಿರ ವರ್ಷಗಳ […]

(Kaup) ಕಾಪು: ಕಾಪು ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ನೇತೃತ್ವದಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪುವಿನ ಓಶಿಯನ್ ಬೀಚ್ ರೆಸಾರ್ಟ್‌ ನಲ್ಲಿ ಭಾನುವಾರ ಬೆಳಿಗ್ಗೆ ನೆರವೇರಿತು.

  “ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಉದ್ಘಾಟಿಸಿದರು.

   ಅವರು ಮಾತನಾಡಿ, ಸುಮಾರು ಆರು ಸಾವಿರ ವರ್ಷಗಳ ಹಿಂದೆ ಚಾಲ್ತಿಗೆ ಬಂದ ಯೋಗ ದಿನಾಚರಣೆ ಇಂದು ಪ್ರಪಂಚಾದ್ಯಂತ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರು ೨೦೧೫ ಜೂನ್‌ ೨೧ರಂದು ಅಂತರಾಷ್ಟ್ರೀಯ ಯೋಗದಿನವನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

  ಶಿರ್ವ ಪತಂಜಲಿ ಯೋಗ ಸಂಸ್ಥೆಯವರ ಸಹಕಾರದಲ್ಲಿ ಕಾಪುವಿನ ಕಾಪುವಿನ ಓಶಿಯನ್ ಬೀಚ್ ರೆಸಾರ್ಟ್‌ನಲ್ಲಿ ಯೋಗ ಶಿಬಿರ ಆಯೋಜಿಸಿದ್ದೇವೆ. ಮಾಜಿ ಶಾಸಕ ಲಾಲಾಜಿ ಮೆಂಡನ್‌ ಯುವ ಮೋರ್ಚಾದ ಸೋನು ಪಾಂಗಾಳ, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮತ್ತು ಸ್ಥಳದಾನಿ ಶ್ರೀಮತಿ ಶಿಲ್ಪಾ ಗಂಗಾಧರ ಸುವರ್ಣ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.

  ಪತಂಜಲಿ ಯೋಗಪೀಠ ಶಿರ್ವದ ಅನಂತರಾಮ್‌ ಶೆಣೈ ಮತ್ತು ತಂಡದ ಶಿಕ್ಷಕರು ಯೋಗ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.

 ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ  ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೋನು ಪಾಂಗಾಳ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಪುರಸಭೆಯ ಸದಸ್ಯರಾದ ನಿತಿನ್, ಹಿರಿಯ ಕಾರ್ಯಕರ್ತರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ನಿವೃತ್ತ ಸೈನಿಕರಾದ ಕುಶ ಸಾಲ್ಯಾನ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.