ಕಾಪು : ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಯು ವಿಶ್ವೇಶ ತೀರ್ಥ ವಿದ್ಯಾಲಯ ಕೈಪುಂಜಾಲು ಇಲ್ಲಿ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಸತೀಶ್ ಕುಂದರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಸುನೀತಾ, ಕಾಪು ಕ್ಲಸ್ಟರ್ ನ ಸಿ.ಆರ್.ಪಿ ಬಬಿತಾ ನಾಗರಾಜ್, ಕಾಪು ಪುರಸಭಾ ಅಧ್ಯಕ್ಷರಾದ ಶ್ರೀಮತಿ ಹರಿನಾಕ್ಶಿ ದೇವಾಡಿಗ, ಕೈಪುಂಜಾಲು ಮೀನುಗಾರರ ವಿವಿಧೊದ್ದೇಶ ಸಹಕಾರ ಸಂಘ ಇದರ ಅಧ್ಯಕ್ಷರಾಗಿರುವ ಗಿರಿರಾಜ್ ಕಿದಿಯೂರು, ಉದ್ಯಮಿ ಮತ್ತು ಸಮಾಜ ಸೇವಕರು ಆಗಿರುವ ಶ್ರೀ ಪ್ರಭಾಕರ ಪೂಜಾರಿ ಕೈಪುಂಜಾಲು, ಕ್ರೀಡಾಧಿಕಾರಿ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಹಿತೇಶ್, ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಇದರ ಕಾರ್ಯದರ್ಶಿಯಾಗಿರುವ ರಮೇಶ್ ಪೂಜಾರಿ, ಚಂದ್ರಶೇಖರ್ ಅಮೀನ್, ವಿಶ್ವೇಶ ತೀರ್ಥ ವಿದ್ಯಾಲಯ ಇದರ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲೂಕೀಸ್ ಸೋನ್ಸ್ ಮತ್ತು ಪ್ರಾಂಶುಪಾಲರಾದ ಸಾಕ್ಷಾತ್ ಯು.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ರೇಖಾ ರಾವ್ ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿದರು. ಕೀರ್ತಿ ವಂದಿಸಿದರು.

