• Home  
  •  ಕಾಪು: ತಹಶಿಲ್ದಾರ್ ಕಚೇರಿಯಲ್ಲಿ ವಚನಕಾರ ನುಲಿಯ ಚಂದಯ್ಯನವರ ದಿನಾಚರಣೆ (Kaup: Celebration of the day of the vachanakara Nuliya Chandaya at the Tahsildar’s office)
- ಕಾಪು ತಾಲೂಕು ಆಡಳಿತ

 ಕಾಪು: ತಹಶಿಲ್ದಾರ್ ಕಚೇರಿಯಲ್ಲಿ ವಚನಕಾರ ನುಲಿಯ ಚಂದಯ್ಯನವರ ದಿನಾಚರಣೆ (Kaup: Celebration of the day of the vachanakara Nuliya Chandaya at the Tahsildar’s office)

Share: ಕಾಪು: ತಹಶಿಲ್ದಾರ್ ಕಚೇರಿಯಲ್ಲಿ ವಚನಕಾರ ನುಲಿಯ ಚಂದಯ್ಯನವರ ದಿನಾಚರಣೆ  (Kaup) ಕಾಪು: ತಾಲ್ಲೂಕು ಕಚೇರಿಯಲ್ಲಿ ಶನಿವಾರ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಕಾಪು ತಹಶಿಲ್ದಾರ್‌ ಡಾ. ಪ್ರತಿಭಾ ಆರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ನುಲಿಯ ಚಂದಯ್ಯನವರಂತೆ ಕಾಯಕ ನಿಷ್ಠೆ ಬೆಳೆಸಿಕೊಂಡು ಅವರು ಹೊಸೆದ ಅರಿವಿನ ಹಗ್ಗವನ್ನು ಮಾದರಿಯಾಗಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಕರೆ ನೀಡಿದರು.  ಚಂದಯ್ಯನವರ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಬೇರೆ ಬೇರೆ ನೆಲೆಗಳಲ್ಲಿ ಎದುರುಗೊಳ್ಳಲಾಗಿದೆ. ನಿಜದ […]

 (Kaup) ಕಾಪು: ತಾಲ್ಲೂಕು ಕಚೇರಿಯಲ್ಲಿ ಶನಿವಾರ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು.

ಕಾಪು ತಹಶಿಲ್ದಾರ್‌ ಡಾ. ಪ್ರತಿಭಾ ಆರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅವರು ಮಾತನಾಡಿ, ನುಲಿಯ ಚಂದಯ್ಯನವರಂತೆ ಕಾಯಕ ನಿಷ್ಠೆ ಬೆಳೆಸಿಕೊಂಡು ಅವರು ಹೊಸೆದ ಅರಿವಿನ ಹಗ್ಗವನ್ನು ಮಾದರಿಯಾಗಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಕರೆ ನೀಡಿದರು.

 ಚಂದಯ್ಯನವರ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಬೇರೆ ಬೇರೆ ನೆಲೆಗಳಲ್ಲಿ ಎದುರುಗೊಳ್ಳಲಾಗಿದೆ. ನಿಜದ ಭಕ್ತಿಯ ಬಗ್ಗೆ, ಕಾಯಕ ಶುದ್ಧಿಯ ಬಗ್ಗೆ ಚಂದಯ್ಯ ಮತ್ತೆ ಮತ್ತೆ ಮಾತನಾಡುತ್ತಾನೆ. ಅಪ್ರಾಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ಕಟುವಾಗಿ ಟೀಕಿಸಿದ್ದಾನೆ. ಸಹ ವಚನಕಾರರು ಚಂದಯ್ಯನ ಬಗ್ಗೆ ವಚನ ಕಟ್ಟಿದ್ದಾರೆ. ಮುಂದೆ ಜನಪದ ಸಮುದಾಯಗಳು ಚಂದಯ್ಯನ ಬಗ್ಗೆ ಪದ ಕಟ್ಟಿ ಹಾಡುವ ಮೂಲಕ ಆತನನ್ನು ಉಳಿಸಿಕೊಂಡಿವೆ ಎಂದು  ತಹಶಿಲ್ದಾರ್ ಬಣ್ಣಿಸಿದರು.

 ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ  ದೀಕ್ಷಿತಾ, ಯಶಸ್ವಿನಿ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.