• Home  
  • ಕಾಪು : ಬಂಟರ ಸಂಘದಿಂದ ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ ಸನ್ಮಾನ (Kaup: Businessman Manohar S. Shetty couple honored by Buntara Sangha)
- CONGARTULATIONS - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಕಾಪು : ಬಂಟರ ಸಂಘದಿಂದ ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ ಸನ್ಮಾನ (Kaup: Businessman Manohar S. Shetty couple honored by Buntara Sangha)

Share: ಕಾಪು : ಬಂಟರ ಸಂಘದಿಂದ ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ ಸನ್ಮಾನ  (Kaup) ಕಾಪು: ಕಳೆದ 33 ವರ್ಷಗಳ ಕಾಲ ಕಾಪು ಬಂಟರ ಸಂಘದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ ಕೊಡುಗೈ ದಾನಿ, ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್ ಶೆಟ್ಟಿ ಮತ್ತವರ ಪತ್ನಿ ಅನುರಾಧ ಮನೋಹರ್ ಶೆಟ್ಟಿ ಇವರನ್ನು ಕಾಪು ಬಂಟರ ಸಂಘದ ಮಹಾಸಭೆ  ಮತ್ತು “ಆಟಿಯ ನೆನಪು” ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ […]

 (Kaup) ಕಾಪು: ಕಳೆದ 33 ವರ್ಷಗಳ ಕಾಲ ಕಾಪು ಬಂಟರ ಸಂಘದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ ಕೊಡುಗೈ ದಾನಿ, ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್ ಶೆಟ್ಟಿ ಮತ್ತವರ ಪತ್ನಿ ಅನುರಾಧ ಮನೋಹರ್ ಶೆಟ್ಟಿ ಇವರನ್ನು ಕಾಪು ಬಂಟರ ಸಂಘದ ಮಹಾಸಭೆ  ಮತ್ತು “ಆಟಿಯ ನೆನಪು” ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.

  ಉದ್ಯಮಿ, ಅನಿವಾಸಿ ಭಾರತೀಯ ಮಲ್ಲಾರು ಶಶಿಧರ ಕೆ. ಶೆಟ್ಟಿ ಅಭಿನಂದಿಸಿ, ಸುಧೀರ್ಘಕಾಲದ ಭಾಗ್ಯ ಅವರಿಗೆ ದೊರೆತಿದೆ. ಇನ್ನೂ ಬಹಳಷ್ಟು ಕಾಲ ಈ ಅತ್ಯಂತ ಪುಣ್ಯದ ಕಾಯಕ ಮಾಡುವ ಅವಕಾಶ ದೇವರು ಒದಗಿಸಲಿ ಎಂದರು.

 ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಕೃಷಿ ಸೇವಾ ಕ್ಷೇತ್ರದಲ್ಲಿ ಅವರ ಸೇವೆ ಅನುಪಮ ಎಂಬ ನೆಲೆಯಲ್ಲಿ ಗುರುತಿಸುತ್ತಿದ್ದೇವೆ ಎಂದು ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಅವರು ಪ್ರಸ್ತಾವನೆಯಲ್ಲಿ ಹೇಳಿದರು.

   ಈ ಸಂದರ್ಭದಲ್ಲಿ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಬಂಟ ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.