• Home  
  • ಕಾಪು ತಹಶೀಲ್ದಾರರಿಂದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಮಿ ಹಸ್ತಾಂತರ (Kaup Tehsildar hands over land for construction of sewage treatment plant)
- PROBLEMS

ಕಾಪು ತಹಶೀಲ್ದಾರರಿಂದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಮಿ ಹಸ್ತಾಂತರ (Kaup Tehsildar hands over land for construction of sewage treatment plant)

Share: ಕಾಪು ತಹಶೀಲ್ದಾರರಿಂದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಮಿ ಹಸ್ತಾಂತರ (Kaup) ಕಾಪು : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣದ ಜಾಗದ ವಿಷಯ ಕೊನೆಗೂ ಸುಖಾಂತ್ಯಗೊಂಡಿದೆ.  ಶನಿವಾರ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ರವರು ಮೂಳೂರು ಗ್ರಾಮದ ಸರ್ವೆ ನಂಬರ್ 99/1 ರ 1.78 ಎಕರೆ ಜಮೀನನ್ನು ಕಾಪು ಪುರಸಭಾ ವ್ಯಾಪ್ತಿಯ ಕೊಳಚೆ ನೀರು ಸಂಸ್ಕರಣಾ ಘಟಕ  ಸ್ಥಾಪನೆಯ ಉದ್ದೇಶಕ್ಕಾಗಿ ಕಾಪು ಪುರಸಭಾಧಿಕಾರಿ ನಾಗರಾಜರವರಿಗೆ ಹಸ್ತಾಂತರಿಸಿದರು.  ಬಹು […]

(Kaup) ಕಾಪು : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣದ ಜಾಗದ ವಿಷಯ ಕೊನೆಗೂ ಸುಖಾಂತ್ಯಗೊಂಡಿದೆ.

 ಶನಿವಾರ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ರವರು ಮೂಳೂರು ಗ್ರಾಮದ ಸರ್ವೆ ನಂಬರ್ 99/1 ರ 1.78 ಎಕರೆ ಜಮೀನನ್ನು ಕಾಪು ಪುರಸಭಾ ವ್ಯಾಪ್ತಿಯ ಕೊಳಚೆ ನೀರು ಸಂಸ್ಕರಣಾ ಘಟಕ  ಸ್ಥಾಪನೆಯ ಉದ್ದೇಶಕ್ಕಾಗಿ ಕಾಪು ಪುರಸಭಾಧಿಕಾರಿ ನಾಗರಾಜರವರಿಗೆ ಹಸ್ತಾಂತರಿಸಿದರು.

 ಬಹು ದಿನಗಳ ಬೇಡಿಕೆ:

  ಸಾರ್ವಜನಿಕ ವಲಯದಲ್ಲಿ ಬಹು ದಿನಗಳಿಂದ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣದ ಬಗ್ಗೆ ಕೂಗು ಕೇಳಿ ಬಂದಿತ್ತು. ಅನುದಾನವೂ ಬಿಡುಗಡೆಯಾಗಿತ್ತು. ಆದರೆ ಸೂಕ್ತ ಜಮೀನು ದೊರೆಯದೆ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಈಗ ತಹಶಿಲ್ದಾರ್ ಪ್ರತಿಭಾ ಆರ್ ರವರು ಸೂಕ್ತ ಜಾಗವನ್ನು ಗುರುತಿಸಿ ಜಮೀನನ್ನು ಹಸ್ತಾಂತರಿಸಿದ್ದಾರೆ.

ತಹಶಿಲ್ದಾರ್ ಪ್ರತಿಭಾ ಆರ್ ಹೇಳಿಕೆ:

“ಸ್ವಚ್ಛ ಕಾಪು– ಸುಂದರ ಕಾಪು ನಮ್ಮ ಆದ್ಯತೆ“

“ಬಹು ದಿನಗಳಿಂದ STP ನಿರ್ಮಾಣಕ್ಕೆ ಜಾಗಕ್ಕಾಗಿ ಬೇಡಿಕೆ ಬಂದಿತ್ತು ಬಹಳ ಪರಾಮರ್ಶೆಯ ನಂತರ ಮೂಳೂರು ಗ್ರಾಮದ ಸರ್ವೆ ನಂಬರ್ 99/1 ಸೂಕ್ತ ಜಾಗ ಎಂದು ತೀರ್ಮಾನಿಸಲಾಯಿತು. ಅದರಂತೆ ಇಂದು ಪುರಸಭೆಗೆ ಜಾಗವನ್ನು ಹಸ್ತಾಂತರಿಸಲಾಗಿದೆ. ಶೀಘ್ರವೇ STP ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸ್ವಚ್ಚ ಕಾಪು, ಸುಂದರ ಕಾಪು ನಮ್ಮ ಆದ್ಯತೆ. ನವ ತಾಲ್ಲೂಕು ಕಾಪು ಕೊಳಚೆ ನೀರು ಮುಕ್ತ ಪ್ರದೇಶವಾಗಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು” ಎಂದು ತಹಶಿಲ್ದಾರ್ ಪ್ರತಿಭಾ ಹೇಳಿದರು.

  ಸರ್ವೇಯರ್ ಸುರೇಶ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಲೋಕನಾಥ್ ಇವರುಗಳ ಜೊತೆ  ನಿಗದಿತ ಜಮೀನನ್ನು ಸರ್ವೆ ಮಾಡಿ ಗಡಿ ಗುರುತು ಮಾಡಿ ತೋರಿಸಿ ಪುರಸಭಾ ಮುಖ್ಯಾಧಿಕಾರಿಯವರಿಗೆ ಹಸ್ತಾಂತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.