ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡವು “ಯಕ್ಷಗವಿಷ್ಠಿ 2025” ರಲ್ಲಿ ಎರಡನೇ ಸ್ಥಾನ
(Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ಎನ್.ಎಮ್ಎಎಮ್ಐಟಿ, ನಿಟ್ಟೆಯಲ್ಲಿ ನಡೆದ “ಯಕ್ಷಗವಿಷ್ಠಿ 2025” ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿದೆ.
ದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ತಂಡಗಳು ಭಾಗವಹಿಸಿದ್ದವು.
ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡವು“ರತ್ನಾವತಿಕಲ್ಯಾಣ”ಎಂಬ ಪ್ರಸಂಗವನ್ನು ಸ್ಫರ್ಧೆಯಲ್ಲಿ ಯಕ್ಷ ಗುರುಗಳಾದ ರಾಕೇಶ್ ರೈ ಅಡ್ಕರವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು.
ತೆಂಕು ತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರು ಈ ಸ್ಪರ್ಧೆಯ ಮೌಲ್ಯಮಾಪನ ನಡೆಸಿದ್ದರು.
ಈ ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಶ್ರೀಶ ರವರ ರತ್ನಾವತಿ ವೇಷಕ್ಕೆ ಪ್ರಥಮ ಬಹುಮಾನ ಹಾಗೂ ಸುರಭಿ ಜೋಗಿಯವರಿಗೆ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಬಹುಮಾನ ದೊರಕಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.

