ಕಾಪು ತಾಲೂಕಿನಾದ್ಯಂತ ಸುರಿಯುತ್ತಿರುವ ಜಡಿ ಮಳೆಗೆ ಗುರುವಾರ ಬೆಳಗ್ಗಿನ ಜಾವ ಪಡುಬಿದ್ರಿ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪ್ರಾಂಗಣ ಮತ್ತು ಗರ್ಭಗುಡಿಯ ಸುತ್ತಲೂ ಮೊಣಕಾಲಿನ ತನಕ ಮಳೆನೀರು ನುಗ್ಗಿದೆ.
ಇಂದು ಸಂಕಷ್ಟಿ ಆಚರಿಸುವ ಶ್ರದ್ಧಾಳುಗಳು ದೇವರ ಪ್ರದಕ್ಷಿಣೆ ಬರಲು ಕಷ್ಟಪಡುವಂತಾಯಿತು.
ಎರ್ಮಾಳು ತೆಂಕ ಎಲ್ಲದಡಿಯಿಂದ ಅದಮಾರು ಕಡೆಗೆ ಸಾಗುವ ಹಾದಿಯಲ್ಲಿ ನೆರೆ ನೀರು ತುಂಬಿದ್ದರಿಂದ ಸಂಚಾರ ವ್ಯತ್ಯಯ ಉಂಟಾಗಿದೆ.
ತಡವಾಗಿ ಪ್ರರಂಭ ಆದಮಳೆಯಿಂದಾಗಿ ಸಹಜವಾಗಿಯೇ ಭತ್ತದ ಬೆಳೆಗೆ ತಡವಾಗಿ ಪ್ರಾರಂಭಗೊಂಡಿದೆ. ಧಾರಾಕಾರ ಮಳೆಯಿಂದ ಭತ್ತದ ಕೃಷಿ ನೆರೆಗೆ ಕೊಚ್ಚಿಕೊಂಡು ಹೋಗಿದೆ.
ಅದಮಾರು – ಮುದರಂಗಡಿ ರಸ್ತೆಯಲ್ಲಿ ನೆರೆ ನೀರು ತುಂಬಿದೆ. ಮಜೂರು, ಉಳಿಯಾರು, ಕರಂದಾಡಿ ಬಯಲು ಪ್ರದೇಶ, ಕಾಪು ಶಿರ್ವ ರಸ್ತೆಯಲ್ಲಿ ನೀರು ತುಂಬಿದ್ದು, ಸ್ಥಳೀಯರಾದ ಸೂರಿ ಶೆಟ್ಟಿ, ಮತ್ತವರ ತಂಡದ ಸದಸ್ಯರು ನೆರೆ ಪೀಡಿತ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ.
ನೆರೆ ಪೀಡಿತ ಪ್ರದೇಶಗಳಿಂದ ಜನರನ್ನು ಬೋಟ್ ಮುಖಾಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

