• Home  
  • ಕಾಪು ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ (Kapu Taluk Level 77th Republic Day Celebration)
- fastival

ಕಾಪು ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ (Kapu Taluk Level 77th Republic Day Celebration)

Share: ಕಾಪು ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ    ಧ್ವಜಾರೋಹಣ ಗೈದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ   (Kaup) ಕಾಪು : ಕಾಪು ತಾಲೂಕು ಆಡಳಿತದ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸೋಮವಾರ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ ನೆರವೇರಿತು.    ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿ ಧ್ವಜಾರೋಹಣ ಗೈದರು.    ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀಪತಿ ತಂತ್ರಿ, ರವಿ ಕಟಪಾಡಿ, ಲೋಕೇಶ್ […]

(Kaup) ಕಾಪು : ಕಾಪು ತಾಲೂಕು ಆಡಳಿತದ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸೋಮವಾರ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ ನೆರವೇರಿತು.

   ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿ ಧ್ವಜಾರೋಹಣ ಗೈದರು.

   ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀಪತಿ ತಂತ್ರಿ, ರವಿ ಕಟಪಾಡಿ, ಲೋಕೇಶ್ ಕೆ ಅಮೀನ್, ಮ್ಯಾಕ್ಸಿಮ್ ಆಳ್ವ ಅವರನ್ನು ಸನ್ಮಾನಿಸಲಾಯಿತು.

   94ಸಿ ಮತ್ತು 94ಸಿಸಿ ಅಡಿಯಲ್ಲಿ ಎಲ್ಲೂರು ಗ್ರಾಮದ ಕೆ. ವಿಟ್ಟು, ನಾಗವೇಣಿ ಗುರುರಾಜ್ ರವಿಕಲ, ಸಾಂತೂರು ಗ್ರಾಮದ ಸದಾನಂದ ಕಾಮತ್, ತೆಂಕ ಗ್ರಾಮದ ಪ್ರಿಯಾ ಸೇರಿದಂತೆ 4 ಫಲಾನುಭವಿಗಳಿಗೆ ಮಂಜೂರಾದ ಹಕ್ಕು ಪತ್ರವನ್ನು ಶಾಸಕರು ವಿತರಿಸಿದರು.

  ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಅನಂತ ಶಂಕರ್, ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ,ಕಾಪು ಪುರಸಭೆಯ ಅಧ್ಯಕ್ಷೆ  ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಕಾಪು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಕಾಪು ತಾಲೂಕು ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನೀಲಕಂಠ ಮೇಸ್ತಾ, ಕಾಪು ಪೋಲಿಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಗೋಪಾಲಕೃಷ್ಣ ಗಾವಂಸ್ಕರ್ ಹಾಗೂ ಕಾಪು ಪುರಸಭೆಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.