• Home  
  • ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ (Udupi: Adani Foundation organizes blood donation camp at Adani Power Plant)  
- social service

ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ (Udupi: Adani Foundation organizes blood donation camp at Adani Power Plant)  

Share:  ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ    (Udupi) ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ಬೃಹತ್ ರಕ್ತದಾನ ಶಿಬಿರ ‘ಗೋ-ರೆಡ್‌ʼ ಶೀರ್ಷಿಕೆಯಡಿ  ನೆರವೇರಿತು. ಅದಾನಿ ಸಮೂಹದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ  ಆಯೋಜಿಸಿದ ‘ಗೋ-ರೆಡ್’ರಕ್ತದಾನ ಶಿಬಿರವನ್ನು ಉಡುಪಿ […]

(Udupi) ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ಬೃಹತ್ ರಕ್ತದಾನ ಶಿಬಿರ ‘ಗೋ-ರೆಡ್‌ʼ ಶೀರ್ಷಿಕೆಯಡಿ  ನೆರವೇರಿತು.

ಅದಾನಿ ಸಮೂಹದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ  ಆಯೋಜಿಸಿದ ‘ಗೋ-ರೆಡ್’ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ. ವೀಣಾಕುಮಾರಿ, ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ,   ಅದಾನಿ ಪ್ರತಿಷ್ಟಾನವು ದೇಶದೆಲ್ಲೆಡೆ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಅದಾನಿ ಸಮೂಹದ ಸ್ಥಾಪಕರಾದ ಗೌತಮ್ ಅದಾನಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದು, ಸಾವಿರಾರು ರಕ್ತದ ಯುನಿಟ್‌ಗಳನ್ನು ಆಯಾ ಪ್ರದೇಶದ ರಕ್ತ ನಿಧಿಗಳಿಗೆ ನೀಡುತ್ತಿದೆ. ಇದರಿಂದ ಅನೇಕ ಜನರಿಗೆ ಉಪಯುಕ್ತವಾಗಿದ್ದು, ಇದೊಂದು ಉತ್ತಮ ಸಮಾಜ ಸೇವೆಯಾಗಿ ಮುಂದುವರೆಯುತ್ತಿದೆ.

 ಅದಾನಿ ಪವರ್ ಲಿಮಿಟೆಡ್, ಉಡುಪಿ ಸಂಸ್ಥೆಯಲ್ಲಿ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಕೂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಹರ್ಷಕರ ಸಂಗತಿ ಎಂದು ಹೇಳಿದರು.

  ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ. ವೀಣಾಕುಮಾರಿ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ವಿವರಿಸುತ್ತಾ ಅದಾನಿ ಸಂಸ್ಥೆಯು ಸತತವಾಗಿ 10 ವರ್ಷಗಳಿಂದ ಪ್ರತಿ ಜೂನ್ ತಿಂಗಳಲ್ಲಿ ತಿಂಗಳಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ.  ಅದಾನಿ ಸಮೂಹದ ಎಲ್ಲ ಉದ್ಯೋಗಿಗಳು ತಮ್ಮ ಸ್ವಇಚ್ಛೆಯಿಂದ ರಕ್ತದಾನ ಮಾಡಿ, ಉಡುಪಿ ಮತ್ತು ಮಂಗಳೂರು ಜಿಲ್ಲಾ ಆಸ್ಪತ್ರೆಗಳ ರಕ್ತನಿಧಿಗೆ ನೀಡುತ್ತಿರುವುದು ಅವಿಭಜಿತ ಜಿಲ್ಲೆಗಳಿಗೆ ಹೆಮ್ಮೆಯ ವಿಷಯವಾಗಿದೆ. ಅದಾನಿ ಸಂಸ್ಥೆಯ ಪ್ರತಿ ಶಿಬಿರವು ಗ್ರಾಮಸ್ಥರಿಗೆ ಒಂದು ವರದಾನವಾಗಿದೆ ಎಂದ ಅವರು,   ಸಂಸ್ಥೆಯ ಸ್ಥಾಪಕರಾದ ಗೌತಮ್ ಅದಾನಿ ಅವರಿಗೆ ಹುಟ್ಟು ಹಬ್ಬದ ಶುಭಾಷಯವನ್ನು ಕೋರಿ ಅದಾನಿ ಸಂಸ್ಥೆಯ ಸಮಾಜಮುಖಿ ಕೆಲಸಗಳಿಗೆ ಶುಭಕೋರಿದರು.

ದಿನವಿಡೀ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 324 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು, ಆಳ್ವ ಅವರು ಎಲ್ಲಾ ರಕ್ತದಾನಿಗಳಿಗೆ ಹೃತ್ಪೂರ್ವಕವಾಗಿ ಅಭಿನಂದಿಸಿದರು.

 ಈ ಸಂದರ್ಭ ಅದಾನಿ ಜಿಎಂ ರವಿ ಜೀರೆ ಸಹಿತ  ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.