ಕಾಪು ಬಿಜೆಪಿ ಕಚೇರಿಯಲ್ಲಿ ಮಂಡಲ ರೈತ ಮೋರ್ಚಾದ ಸಭೆ
(Kaup) ಕಾಪು: ಮಂಡಲದ ನೂತನ ರೈತ ಮೋರ್ಚಾ ಸಭೆಯು ಬಿಜೆಪಿ ಕಚೇರಿ ಯಲ್ಲಿ ರೈತ ಮೋರ್ಚಾ ಅಧ್ಯಕ್ಷರಾದ ಕೃಷ್ಣ ರಾವ್ ಮಜುರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂದಿನ ದಿನಗಲ್ಲಿ ರೈತ ಮೋರ್ಚಾ ವತಿಯಿಂದ ನಡೆಯುವ ಕಾರ್ಯಕ್ರಮ ಗಳ ಕಾರ್ಯಕ್ರಮ ಗಳ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ಇವರನ್ನು ಮಂಡಲ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿಯವರು ಸನ್ಮಾನಿಸಿದರು.
ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್, ಕೇಶವ ಮೊಯ್ಲಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ನಿಕಟ ಪೂರ್ವ ರೈತ ಮೋರ್ಚಾ ಅಧ್ಯಕ್ಷರಾದ ಗುರುನಂದನ್ ನಾಯಕ್, ಹರೀಶ್ ಶೆಟ್ಟಿ ಚೇರ್ಕಾಡಿ, ಮಹೇಂದ್ರ ಕುಮಾರ್ ಬ್ರಹ್ಮಾವರ, ಜಗದೀಶ್ ಮೊಯ್ಲಿ, ಗಿರೀಶ್ ಕುಮಾರ್, ಗಣೇಶ್ ಶೆಟ್ಟಿ, ಪ್ರಕಾಶ್ ಹೆಬ್ಬಾರ್, ಚಂದ್ರಹಾಸ್ ಕೋಟ್ಯಾನ್, ಅಶೋಕ್ ಪೂಜಾರಿ, ಸಂತೋಷ್, ಹರ್ಷಿತ್ ಕುಮಾರ್, ಅನಿಲ್ ಶೆಟ್ಟಿ ಮಲ್ಲಾರು, ಸಂತೋಷ್ ಆರ್ ದೇವಾಡಿಗ ಸಭೆಯಲ್ಲಿ ಉಪಸ್ಥಿತರಿದ್ದರು.

