• Home  
  • ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತ – ಡಾ ವಿನ್ಸೆಂಟ್ ಆಳ್ವಾ(Fastivals are a symbol of sacrifice and brotherhood : Dr. Vincent Alva)
- fastival

ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತ – ಡಾ ವಿನ್ಸೆಂಟ್ ಆಳ್ವಾ(Fastivals are a symbol of sacrifice and brotherhood : Dr. Vincent Alva)

Share: ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತ – ಡಾ ವಿನ್ಸೆಂಟ್ ಆಳ್ವಾ ಉಡುಪಿಯಲ್ಲಿ ಈದ್ ಸೌಹಾರ್ದ ಕೂಟ (Udupi) ಉಡುಪಿ: ಪ್ರತಿಯೊಂದು ಹಬ್ಬಗಳು ಸಮಾಜದಲ್ಲಿ ಸಂತೋಷವನ್ನು ಹಂಚುತ್ತದೆ. ಕೇವಲ ಮನೆಯವರೇ ಹಬ್ಬ ಆಚರಿಸಿದರೆ ಅದು ಹಬ್ಬ ಅನಿಸುವುದಿಲ್ಲ. ಇತರರೊಂದಿಗೆ ಸೇರಿ ಆಚರಿಸಿ, ಇತರ ಮೊಗದಲ್ಲೂ ಸಂತೋಷ ಕಂಡರೆ ಮಾತ್ರ ಹಬ್ಬ ಎನಿಸುತ್ತದೆ. ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾಗಿದೆ ಎಂದು ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಹೇಳಿದರು.  ಅವರು ಜಮಾಅತೆ ಇಸ್ಲಾಮೀ […]

ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತಡಾ ವಿನ್ಸೆಂಟ್ ಆಳ್ವಾ

ಉಡುಪಿಯಲ್ಲಿ ಈದ್ ಸೌಹಾರ್ದ ಕೂಟ

(Udupi) ಉಡುಪಿ: ಪ್ರತಿಯೊಂದು ಹಬ್ಬಗಳು ಸಮಾಜದಲ್ಲಿ ಸಂತೋಷವನ್ನು ಹಂಚುತ್ತದೆ. ಕೇವಲ ಮನೆಯವರೇ ಹಬ್ಬ ಆಚರಿಸಿದರೆ ಅದು ಹಬ್ಬ ಅನಿಸುವುದಿಲ್ಲ. ಇತರರೊಂದಿಗೆ ಸೇರಿ ಆಚರಿಸಿ, ಇತರ ಮೊಗದಲ್ಲೂ ಸಂತೋಷ ಕಂಡರೆ ಮಾತ್ರ ಹಬ್ಬ ಎನಿಸುತ್ತದೆ. ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾಗಿದೆ ಎಂದು ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಹೇಳಿದರು.

 ಅವರು ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಹಮ್ಮಿಕೊಂಡ ಈದ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 ಇನ್ನೋರ್ವ ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಮಾತ‌ನಾಡಿ, ಕರಾವಳಿಯಲ್ಲಿ ಮುಸ್ಲಿಮರ ಕೊಡುಗೆ ಬಹಳಷ್ಟು ಇವೆ.‌ ಹಿಂದೂ, ಮುಸ್ಲಿಮ್  ಮತ್ತು ಕ್ರೈಸ್ತರು ಸೌಹಾರ್ದತೆಯಿಂದ ಬದುಕು ಕಾಣಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ, ಜನಾಂಗೀಯತೆ ಎಂಬುದು ಇರಬಾರದು. ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನೆ ಯಾವಾಗ ನಮ್ಮಲ್ಲಿ ಮೂಡುತ್ತದೆಯೋ ಆಗ ಜಾನಗೀಯತೆ ಬೆಳೆದುಬರುತ್ತದೆ. ಅದರ ಬದಲಾಗಿ ನಾವೆಲ್ಲರೂ ಮಾನವರು, ಪರಸ್ಪರ ಸಹೋದರರು ಎಂಬ ಭಾವನೆ ಸದಾ ನಮ್ಮಲ್ಲಿ ಇರಬೇಕಾಗಿದೆ. ಜಗತ್ತಿನುದ್ದಕ್ಕೂ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಾವು ಇಲ್ಲಿಯವರೆಗೆ ತಲುಪಿದ್ದೇವೆ. ಯಾರಾದರೂ ಏನಾದರೂ ಪಡೆಯಬೇಕಿದ್ದರೆ ಅದಕ್ಕೆ ಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯವಾಗಿದೆ. ತ್ಯಾಗ ಅಥವಾ ಬಲಿದಾನ ಮಾಡದಿದ್ದರೆ ಅದರಲ್ಲಿ ಜಯ ಎನ್ನುವುದೇ ಸಿಗುವುದಿಲ್ಲ ಎಂದು ಹೇಳಿದರು.

 ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷರಾದ ನಿಸಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ಪರಾಜ್ ಮನ್ನ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್ ಧನ್ಯವಾದವಿತ್ತರು.

Leave a comment

Your email address will not be published. Required fields are marked *

eMedia Kannada  @2025. All Rights Reserved.