• Home  
  • ಕಾಪು ಬಿಲ್ಲವರ ಸಹಾಯಕ ಸಂಘ ಇಂದು ಸಭಾಭವನ ಲೋಕಾರ್ಪಣೆ (Kaup Billavara Auxiliary Association to inaugurate assembly hall today)
- ಸಂಘ, ಸಂಸ್ಥೆಗಳು

ಕಾಪು ಬಿಲ್ಲವರ ಸಹಾಯಕ ಸಂಘ ಇಂದು ಸಭಾಭವನ ಲೋಕಾರ್ಪಣೆ (Kaup Billavara Auxiliary Association to inaugurate assembly hall today)

Share: ಕಾಪು ಬಿಲ್ಲವರ ಸಹಾಯಕ ಸಂಘ ಇಂದು ಸಭಾಭವನ ಲೋಕಾರ್ಪಣೆ  ಬಿಲ್ಲವರ ಭವನ ಉದ್ಘಾಟಿಸಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ   (Kaup)ಕಾಪು: ಕಾಪು ಬಿಲ್ಲವರ ಸಹಾಯಕ ಸಂಘದ ಆವರಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಪು ಬಿಲ್ಲವರ ಭವನ ಹಾಗೂ ಸುಮಾರು 650 ಆಸನ ವ್ಯವಸ್ಥೆಯುಳ್ಳ ಹವಾನಿಯಂತ್ರಿತ ಸುಸಜ್ಜಿತ ಸಭಾಭವನದ ಉದ್ಘಾಟನೆ ಶನಿವಾರ ಸಂಜೆ ಜರಗಲಿದೆ.    ಕಾರ್ಯಕ್ರಮದಲ್ಲಿ ಸೋಲೂರು ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ […]

(Kaup)ಕಾಪು: ಕಾಪು ಬಿಲ್ಲವರ ಸಹಾಯಕ ಸಂಘದ ಆವರಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಪು ಬಿಲ್ಲವರ ಭವನ ಹಾಗೂ ಸುಮಾರು 650 ಆಸನ ವ್ಯವಸ್ಥೆಯುಳ್ಳ ಹವಾನಿಯಂತ್ರಿತ ಸುಸಜ್ಜಿತ ಸಭಾಭವನದ ಉದ್ಘಾಟನೆ ಶನಿವಾರ ಸಂಜೆ ಜರಗಲಿದೆ.

   ಕಾರ್ಯಕ್ರಮದಲ್ಲಿ ಸೋಲೂರು ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

 ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ನೂತನ ಬಿಲ್ಲವರ ಭವನವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ.

   ಶ್ರೀ ನಾರಾಯಣಗುರು ಸಭಾಂಗಣವನ್ನು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಭೋಜನ ಶಾಲೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಆಡಳಿತ ಕಚೇರಿಯನ್ನು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ದಿ. ಸಿಂಧು ಪೂವ ಪೂಜಾರಿ ವೇದಿಕೆಯನ್ನು ನಾಡೋಜ ಜಿ. ಶಂಕರ್ ಹಾಗೂ ಭವನದ ಮುಖ್ಯ ದ್ವಾರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.

  ನೂತನ ಸಭಾಂಗಣ ಕಾಪುವಿನ ಮಧ್ಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಸುಲಭ, ನೇರ ಸಂಪರ್ಕ, ಸಮಕಾಲೀನ ವಾಸ್ತುಶೈಲಿಯಲ್ಲಿ ವಿನ್ಯಾಸಗೊಂಡ ಆಧುನಿಕ ಕಟ್ಟಡವಾಗಿದೆ. ವಿಶಾಲವಾದ ವಾಹನ ನಿಲುಗಡೆ ವ್ಯವಸ್ಥೆ, ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ಸರಿಹೊಂದುವಂತೆ ನಿರ್ಮಾಣ, ವಿಶಾಲವಾದ ವೇದಿಕೆ. ಸುಮಾರು 650 ಆಸನ ವ್ಯವಸ್ಥೆ, ಆಕರ್ಷಕ ಒಳವಿನ್ಯಾಸದ ಸಂಪೂರ್ಣ ಹವಾನಿಯಂತ್ರಿತ ಸಭಾಂಗಣ, 350 ಆಸನದ ವಿಶಾಲವಾದ ಭೋಜನಾಲಯ ಹೊಂದಿದೆ.

   ವಿಶೇಷ ನೈರ್ಮಲ್ಯ ಹಾಗೂ ಶುಚಿತ್ವದೊಂದಿಗೆ ಆಧುನಿಕ ಮಾದರಿಯ ಅಡುಗೆ ಶಾಲೆ, ನಿರಂತರ ಶುದ್ಧನೀರಿನ ವ್ಯವಸ್ಥೆಹಾಗೂ ನಿರಂತರ ವಿದ್ಯುತ್, ಜನರೇಟರ್, ಲಿಫ್ಟ್ ವ್ಯವಸ್ಥೆ ವ್ಯವಸ್ಥಿತವಾದ ಶೌಚಾಲಯ, ಕೈ ತೊಳೆಯುವ ವ್ಯವಸ್ಥೆ ಸಭಾಂಗಣದ ಎದುರುಗಡೆ ಪ್ರಾರ್ಥನೆ, ಪೂಜಾ ಕಾರ್ಯಗಳಿಗೆ ದೇವತಾ ಮಂದಿರ ಮೊದಲಾದ ವಿಶೇಷತೆಗಳನ್ನು ಹೊಂದಿದೆ.

 ಏ. 12ರಂದು ಸಂಜೆ ಸಭಾ ಕಾರ್ಯಕ್ರಮ ಹಾಗೂ ದಾನಿಗಳಿಗೆ ಪ್ರಮುಖರಿಗೆ ಗೌರವಾರ್ಪಣೆ ಜರಗಲಿದೆ. ಬಳಿಕ ನೃತ್ಯ ಕಾರ್ಯಕ್ರಮ ಹಾಗೂ ತಾಂಬೂಲ ಕಲಾವಿದೆರ್ ಪುಂಚಾಲಕಟ್ಟಿ ಅವರಿಂದ “ಎಲ್ಲೆ ದಾದ ಏರೆಗ್ ಗೊತ್ತು” ತುಳು ನಾಟಕ ಪ್ರದರ್ಶನ ಜರಗಲಿದೆ ಎಂದು ಸಂಘದ ಅಧ್ಯಕ್ಷ ವಿಕ್ರಂ ಕಾಪು, ಗೌರವಾಧ್ಯಕ್ಷ  ಪ್ರಭಾಕರ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ವಿಠಲ ಬಿ. ಸಾಲ್ಯಾನ್ ಹಾಗೂ ಕಾರ್ಯದರ್ಶಿ ಅನಿಲ್ ಕುಮಾರ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.