• Home  
  • ಕಾಪು: ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ (Kaup: Muhurat for Ranga Taranga’s new play “Vikram Veda”)
- ಧಾರ್ಮಿಕ

ಕಾಪು: ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ (Kaup: Muhurat for Ranga Taranga’s new play “Vikram Veda”)

Share: ಕಾಪು: ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ  ಕಾಪು: ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ   ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ನಡೆದ ಮುಹೂರ್ತ ಕಾರ್ಯಕ್ರಮ (Kaup) ಕಾಪು: ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ಬುಧವಾರ ದಿ. ಲೀಲಾಧರ ಶೆಟ್ಟಿಯವರ ಸಾರಥ್ಯದ ಕಾಪುವಿನ ಖ್ಯಾತ ನಾಟಕ ಸಂಸ್ಥೆ “ರಂಗ ತರಂಗ” ದ 19 ನೇ ಸಾಮಾಜಿಕ, ಹಾಸ್ಯಮಯ “ವಿಕ್ರಂ ವೇದ” ನೂತನ […]

(Kaup) ಕಾಪು: ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ಬುಧವಾರ ದಿ. ಲೀಲಾಧರ ಶೆಟ್ಟಿಯವರ ಸಾರಥ್ಯದ ಕಾಪುವಿನ ಖ್ಯಾತ ನಾಟಕ ಸಂಸ್ಥೆ “ರಂಗ ತರಂಗ” ದ 19 ನೇ ಸಾಮಾಜಿಕ, ಹಾಸ್ಯಮಯ “ವಿಕ್ರಂ ವೇದ” ನೂತನ ನಾಟಕಕ್ಕೆ ಮುಹೂರ್ತ  ನೆರವೇರಿತು.

 ದೇವಳದ ಪ್ರಧಾನ ಅರ್ಚಕ ಜನಾರ್ಧನ ಭಟ್‌ ರವರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

 ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ ದೀಪ ಬೆಳಗಿಸಿ ರಂಗ ತಂಡಕ್ಕೆ ಶುಭ ಹಾರೈಸಿದರು.

  ಈ ಸಂದರ್ಭ ಅವರು ಮಾತನಾಡಿ, ರಂಗ ತರಂಗ ಸಂಸ್ಥೆಯ ಹಿಂದಿನ 18 ನಾಟಕಗಳ ಮುಹೂರ್ತದಲ್ಲಿಯೂ ನಾನು ಭಾಗವಹಿಸಿದ್ದು, ಈಗ 19 ನೇ ನಾಟಕದ ಮುಹೂರ್ತದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಹಿಂದಿನ ಎಲ್ಲಾ ನಾಟಕಗಳಂತೆ “ವಿಕ್ರಂ ವೇದ” ನಾಟಕವೂ ಯಶ ಕಾಣಲಿ ಎಂದು ಹಾರೈಸಿದರು.

 ಸಂಸ್ಥೆಯ ಮುಖ್ಯಸ್ಥರಾದ ಶರತ್‌ ಉಚ್ಚಿಲ ಮಾತನಾಡಿ, ದಿ. ಕೆ. ಲೀಲಾಧರ ಶೆಟ್ಟಿಯವರ ಸಾರಥ್ಯದಲ್ಲಿ 19 ನೇ ನಾಟಕಕ್ಕೆ ಇಂದು ಮುಹೂರ್ತ ನೆರವೇರಿಸಿದ್ದೇವೆ. ಗಂಡ ಹೆಂಡತಿ ನಡುವಿನ ಪ್ರೇಮ, ವಿರಸ ಮತ್ತು ವಿಚ್ಚೇದನದ ಬಗ್ಗೆ ಉತ್ತಮ ಕಥಾ ಹಂದರದ ನಾಟಕ ಇದಾಗಿದ್ದು, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

 ಸಂಸ್ಥೆಯ ರುವಾರಿ ಪ್ರಸನ್ನ ಶೆಟ್ಟಿ ಬೈಲೂರು ಮಾತನಾಡಿ, “ವಿಕ್ರಂ ವೇದ” ನಾಟಕವು ಅಗಸ್ಟ್‌ ತಿಂಗಳಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ಹಿಂದಿನ ನಾಟಕದಂತೆ ಈ ನಾಟಕಕ್ಕೂ ಸರ್ವರ ಸಹಕಾರ ಅಗತ್ಯ ಎಂದರು.

  ಈ ಸಂದರ್ಭ ಶ್ರೀಕರ ಶೆಟ್ಟಿ ಕಲ್ಯ, ನಯೇಶ್‌ ಶೆಟ್ಟಿ ಎಲ್ಲೂರು, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್‌ ಕಾಪು,‌ ರವೀಂದ್ರ ಮಲ್ಲಾರು, ಮಾಧವ ಪಾಲನ್‌, ಉದಯ ಶೆಟ್ಟಿ, ಬಾಲಾಜಿ ಯೋಗೀಶ್‌ ಶೆಟ್ಟಿ, ರವಿ ಮಂದಾರ, ಸ್ವರ್ಣ ಸುಂದರ್‌, ನಾರಾಯಣ ಶೆಟ್ಟಿ ಕೊಪ್ಪಲಂಗಡಿ, ರಘುರಾಮ ಶೆಟ್ಟಿ ಕಾಪು, ದಿವಾಕರ ಶೆಟ್ಟಿ ಪೊಲ್ಯ, ವಿಶ್ವನಾಥ್‌ ಕಾಪು, ಸರ್ವೋತ್ತಮ ಕುಂದರ್‌, ಸುರೇಶ್‌ ಪ್ರಭು, ಕಲಾವಿರುಗಳಾದ ಶಿವಪ್ರಸಾದ್‌ ಪೂಂಜಾ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ರಘುರಾಜ್ ಪಣಿಯಾಡಿ, ಶ್ರೀನಿವಾಸ ಆಚಾರ್ಯ ಉಚ್ಚಿಲ, ರಾಜೇಶ್‌ ಅಳಪೆ, ಪ್ರವೀಣ್ ಕೊಡಕ್ಕಲ್, ಯಶವಂತ್‌ ಉಪ್ಪೂರು, ದೀಪಕ್‌ ಮಳಲಿ, ಹರೀಶ್‌ ಕೋಟ್ಯಾನ್‌, ಕಾಪು, ಮಮತಾ, ಭವ್ಯ, ಪವಿತ್ರಾ, ನವ್ಯ, ಸುರೇಶ್‌ ಪಣಿಯೂರು, ಮಧುಕರ್‌ ಕೊಪ್ಪಲಂಗಡಿ, ಹಾಗೂ ರಂಗತರಂಗ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.