• Home  
  • ಕಾಪು ರಾಜೀವ ಭವನದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮ (Iftar party program at Kaup Rajiv Bhavan)
- ಸೌಹಾರ್ಧ

ಕಾಪು ರಾಜೀವ ಭವನದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮ (Iftar party program at Kaup Rajiv Bhavan)

Share: ಕಾಪು ರಾಜೀವ ಭವನದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮ ಕಾರ್ಯಕ್ರಮದ ನೇತೃತ್ವ ವಹಿಸಿದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ (Kaup) ಕಾಪು : ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಗುರುವಾರ ಸಂಜೆ ಕಾಪು ರಾಜೀವ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಸೌಹಾರ್ದ ಇಫ್ತಾರ್ ಕೂಟ  ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಜಾತಿ, […]

(Kaup) ಕಾಪು : ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಗುರುವಾರ ಸಂಜೆ ಕಾಪು ರಾಜೀವ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಸೌಹಾರ್ದ ಇಫ್ತಾರ್ ಕೂಟ  ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಜಾತಿ, ಸಂಸ್ಕೃತಿಯನ್ನು ಗೌರವಿಸುವ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ದೀಪಾವಳಿ, ಕ್ರಿಸ್ಮಸ್, ಇಫ್ತಾರ್ ಕೂಟವನ್ನು ಆಯೋಜಿಸುವುದರೊಂದಿಗೆ ಸರ್ವ ಧರ್ಮದ ಆರಾಧನೆಗೆ ಗೌರವ ಸೂಚಿಸುತ್ತಾ ಬರುತ್ತಿದೆ. ಸೌಹಾರ್ದತೆ, ಸಾಮರಸ್ಯ ಬೆಳಗಬೇಕು. ಒಂದು ಧರ್ಮದ ಆಚರಣೆ ಮತ್ತೊಂದು ಧರ್ಮದವರಿಗೆ ತಿಳುವಳಿಕೆ ಸಿಗುವ ಮೂಲಕ ಪರಸ್ಪರ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಬೇಕೆನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಪಡುಬಿದ್ರಿ ಬ್ಲಾಕ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ರಮೀಜ್ ಹುಸೈನ್‌, ಹೆಜಮಾಡಿ ಬ್ಲಾಕ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಭೋದ್‌ ಚಂದ್ರ ಹೆಜಮಾಡಿ, ಉಚ್ಚಿಲ ಬ್ಲಾಕ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಕುಮಾರ್‌ ಹಾಗೂ ಮಲ್ಲಾರು ಬ್ಲಾಕ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ನಸೀರ್ ಇಕ್ಯಾವನ್‌ ಅವರನ್ನು ಸನ್ಮಾನಿಸಲಾಯಿತು.

 ಈ  ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ.) ಅಧ್ಯಕ್ಷ ವೈ ಸುಕುಮಾರ್, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಶರ್ಫುದ್ದೀನ್‌ ಶೇಖ್‌, ನವೀನ್‌ ಚಂದ್ರ ಸುವರ್ಣ, ನವೀನ್‌ ಚಂದ್ರ ಜೆ ಶೆಟ್ಟಿ, ನವೀನ್‌ ಎನ್‌ ಶೆಟ್ಟಿ, ಗಣೇಶ್‌ ಕೋಟ್ಯಾನ್‌ ಪಡುಬಿದ್ರಿ, ದೀಪಕ್‌ ಕುಮಾರ್‌ ಎರ್ಮಾಳು, ಕಾಪು ದಿವಾಕರ ಶೆಟ್ಟಿ, ಸುಧೀರ್‌ ಕುಮಾರ್‌ ವೈ, ತಸ್ಲೀನ್‌ ಅರಹಾ, ಯಶವಂತ್‌ ಪಲಿಮಾರು, ಆಶಾ ಕಟಪಾಡಿ, ಆಶಾ ಕಾಪು, ಜ್ಯೋತಿ ಮೆನನ್‌, ರಮೀಝ್‌ ಹುಸೈನ್‌, ವಾಹಿದ್‌ ಶೇಖ್‌, ಜೀತೇಂದ್ರ ಫುರ್ಟಾಡೋ, ಪ್ರಶಾಂತ್‌ ಜತ್ತನ್ನ, ಶಾಂತಲತಾ ಶೆಟ್ಟಿ, ಸಾದಿಕ್‌ ದಿನಾರ್‌, ಹಸನಬ್ಬ ಶೇಖ್‌, ರಿಯಾಜ್‌ ಮುದರಂಗಡಿ, ವಿಶ್ವಾಸ್‌ ಅಮೀನ್‌, ಅಮೀರ್‌ ಮಹಮ್ಮದ್‌ ಹಾಗೂ ಸ್ಥಳೀಯ ಚರ್ಚ್‌ ಹಾಗೂ ಮಸೀದಿಯ ಧರ್ಮಗುರುಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.