ಕಾಪು ರೋಟರಿ ಕ್ಲಬ್ ರಜತೋತ್ಸವ : ಕಾಪು ಗೃಹ ರಕ್ಷಕ ದಳದ ಮಾಜಿ ಘಟಕಾಧಿಕಾರಿಯವರಿಗೆ ಅಭಿನಂದನೆ
(Kaup) ಕಾಪು: ಕಾಪು ರೋಟರಿ ಕ್ಲಬ್ ಇದರ ರಜತೋತ್ಸವದ ಸಮಾರೋಪ ಕಾರ್ಯಕ್ರಮದ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಪು ಗೃಹ ರಕ್ಷಕ ದಳದ ಮಾಜಿ ಘಟಕಾಧಿಕಾರಿಯವರಾಗಿ ಸೇವೆ ಸಲ್ಲಿಸಿ, ನಿವೃತ್ತಿಗೊಂಡ ಲಕ್ಷ್ಮೀ ನಾರಾಯಣರವರ ಸೇವೆಯನ್ನು ಪರಿಗಣಿಸಿ, ಅಭಿನಂದಿಸಲಾಯಿತು.
ಕಾಪುವಿನ K1 ಹೋಟೆಲ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕಾರ್ಯದರ್ಶಿ ರಾಜೇಂದ್ರನಾಥ್, ರೋಟರಿ ಜಿಲ್ಲಾ ಗವರ್ನರ್ ರೊ. ಸಿಎ ದೇವಾನಂದ್, ಸಹಾಯಕ ಗವರ್ನರ್ ರೊ. ಅನಿಲ್ ಡೇಸಾ, ವಲಯ ಸಹಾಯಕ ರೊ. ಜಾನ್ ಸಿಕ್ಟೇರಾ ಹಾಗೂ ಕಾಪು ರೋಟರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪು ಪರಿಸರದ 25 ಮಂದಿ ಸಾಧಕರನ್ನು ಅಭಿನಂದಿಸಲಾಯಿತು.

