• Home  
  • ಕಾಪು: ಶ್ರೀ ಮೂರನೇ ಮಾರಿಗುಡಿಯ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆ (Kaup: Dedication notice for the new silver throne of Kalya Sri Third Marigudi released)
- ಧಾರ್ಮಿಕ

ಕಾಪು: ಶ್ರೀ ಮೂರನೇ ಮಾರಿಗುಡಿಯ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆ (Kaup: Dedication notice for the new silver throne of Kalya Sri Third Marigudi released)

Share: ಕಾಪು: ಶ್ರೀ ಮೂರನೇ ಮಾರಿಗುಡಿಯ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆ ಕಾಪುವಿನ ಮೂರನೇ ಮಾರಿಗುಡಿಯ ಗದ್ದುಗೆ ಸಮರ್ಪಣೆಗೆ ಎಲ್ಲರೂ ಕೈ ಜೋಡಿಸೋಣ : ಶಾಸಕ ಗುರ್ಮೆ (Kaup) ಕಾಪು : ಕಾಪುವಿನ ಕಲ್ಯ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರವನ್ನು ಸೋಮವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡಿ, ಪಕ್ಷ, ಮೇಲು- ಕೀಳು ಎಂಬ ಭಾವನೆಗಳನ್ನು ಬದಿಗೊತ್ತಿ ನಾವೆಲ್ಲರೂ […]

(Kaup) ಕಾಪು : ಕಾಪುವಿನ ಕಲ್ಯ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರವನ್ನು ಸೋಮವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಬಿಡುಗಡೆಗೊಳಿಸಿದರು.

ಅವರು ಮಾತನಾಡಿ, ಪಕ್ಷ, ಮೇಲು- ಕೀಳು ಎಂಬ ಭಾವನೆಗಳನ್ನು ಬದಿಗೊತ್ತಿ ನಾವೆಲ್ಲರೂ ಸಮಾನತೆ ದೃಷ್ಟಿಯಿಂದ ಕಾರ್ಯವೆಸಗಿದಾಗ ಸಫಲತೆ ಕಾಣಬಹುದು. ಕಾಪುವಿನ ಮೂರನೇ ಮಾರಿಗುಡಿಯ ಮಾರಿಯಮ್ಮನ ಗದ್ದುಗೆ ಸಮರ್ಪಣೆಗೆ ಎಲ್ಲರೂ ಕೈ ಜೋಡಿಸೋಣ ಎಂದರು.

ಈ ಸಂದರ್ಭ ಶ್ರೀ ಲಕ್ಷ್ಮೀ ಜನಾರ್ಧನ ದೇಗುಲ ಮತ್ತು ಕಲ್ಯ ಮಾರಿಗುಡಿ ಆಡಳಿತ ಮೊಕ್ತೇಸರ ಮನೋಹರ ಎಸ್‌ ಶೆಟ್ಟಿ, ಹಳೆ ಮಾರಿಗುಡಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ದೇವಳದ ತಂತ್ರಿ ಕೆ.ಪಿ ಶ್ರೀನಿವಾಸ ತಂತ್ರಿ, ಕಾಪು ಬೀಡು ಅನಿಲ್ ಬಲ್ಲಾಳ್, ಎರ್ಮಾಳು ಶಶಿಧರ್ ಕೆ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಕಾಪು ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಗಿರೀಶ್ ಪಾತ್ರಿ, ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.

ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.