• Home  
  •  ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜದ ಕಡೆಗಣನೆ : ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ (Ignoring the Mogaveera community in the management committee of Kaup Sri Hosa Marigudi: D.K. Mogaveera Mahajana Sangh condemns)
- PROBLEMS

 ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜದ ಕಡೆಗಣನೆ : ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ (Ignoring the Mogaveera community in the management committee of Kaup Sri Hosa Marigudi: D.K. Mogaveera Mahajana Sangh condemns)

Share: ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜದ ಕಡೆಗಣನೆ : ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ (Uchila) ಉಚ್ಚಿಲ: ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಮೊಗವೀರ ಸಮಾಜವನ್ನು ಕಡೆಗಣನೆ ಮಾಡಿದ್ದಾರೆ ಎಂದು  ದಕ್ಷಿಣ ಕನ್ನಡ  ಮೊಗವೀರ ಮಹಾಜನ ಸಂಘ ಖಂಡನೆ ವ್ಯಕ್ತಪಡಿಸಿದೆ.  ಕಾಪು ಶ್ರೀ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದಿನಿಂದಲೂ ಮೊಗವೀರ ಸಮಾಜಕ್ಕೆ 2 ಪ್ರಾತಿನಿಧ್ಯ ನೀಡಲಾಗುತಿತ್ತು. ಅದರಂತೆ ಈಗಿನ ಸಮಿತಿಯಲ್ಲಿ ಶ್ರೀಧರ […]

(Uchila) ಉಚ್ಚಿಲ: ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಮೊಗವೀರ ಸಮಾಜವನ್ನು ಕಡೆಗಣನೆ ಮಾಡಿದ್ದಾರೆ ಎಂದು  ದಕ್ಷಿಣ ಕನ್ನಡ  ಮೊಗವೀರ ಮಹಾಜನ ಸಂಘ ಖಂಡನೆ ವ್ಯಕ್ತಪಡಿಸಿದೆ.

 ಕಾಪು ಶ್ರೀ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದಿನಿಂದಲೂ ಮೊಗವೀರ ಸಮಾಜಕ್ಕೆ 2 ಪ್ರಾತಿನಿಧ್ಯ ನೀಡಲಾಗುತಿತ್ತು. ಅದರಂತೆ ಈಗಿನ ಸಮಿತಿಯಲ್ಲಿ ಶ್ರೀಧರ ಕಾಂಚನ್‌ರವರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಶ್ರೀಧರ್ ಕಾಂಚನ್‌ರವರು ಅಕಾಲಿಕವಾಗಿ ದೈವಾಧೀನರಾಗಿದ್ದು, ಅವರ ಸ್ಥಾನಕ್ಕೆ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಬೇರೆ ಸಮಾಜದವರನ್ನು ಆಯ್ಕೆ ಮಾಡಲಾಗಿದೆ.

 ಕಾಪು ಕ್ಷೇತ್ರದಲ್ಲಿ ಬಹು ಸಂಖ್ಯೆಯಲ್ಲಿರುವ ಮೊಗವೀರ ಸಮಾಜಕ್ಕೆ ಅವಮಾನ ಮಾಡಲಾಗಿದೆ. ಸರಕಾರದ ಸ್ಥಳೀಯ ಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರ ಮೊಗವೀರ ಸಮಾಜವನ್ನು ಕಡೆಗಣಿಸಿದ್ದರ ಬಗ್ಗೆ ದ.ಕ. ಮೊಗವೀರ ಮಹಾಜನ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

  ಸಮಾಜಕ್ಕೆ ಮಾಡಿದ ಅನ್ಯಾಯವನ್ನು ಈ ಕೂಡಲೇ ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

  ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯದಲ್ಲಿ ನಮ್ಮ ಸಮಾಜ ಭಾಂಧವರು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತೇವೆ.

  ಈ ಹಿಂದೆ ಕಾಪು ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಮೊಗವೀರ ಸಮಾಜದ ಇಬ್ಬರಿಗೆ ಪ್ರಾತಿನಿಧ್ಯ  ನೀಡಲಾಗುತ್ತಿದ್ದು, ಆದರೆ ಈ ಬಾರಿ ಒಬ್ಬರಿಗೆ ಮಾತ್ರ ಪ್ರಾತಿನಿಧ್ಯ ನೀಡಿ, ಅಲ್ಲೂ ತಾರತಮ್ಯ ಮಾಡಿ ಮೊಗವೀರ ಸಮಾಜವು ಧಾರ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಜನಪ್ರತಿನಿಧಿಗಳು ಹಾಗೂ ಸರಕಾರ ಕಡೆಗಣಿಸುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸದೆ.

ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು  ದಕ್ಷಿಣ ಕನ್ನಡ  ಮೊಗವೀರ ಮಹಾಜನ ಸಂಘ ನೀಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.