• Home  
  • ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ (Udupi dc vidhyakumari)
- ಕರಾವಳಿ - ಪ್ರಚಲಿತ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ (Udupi dc vidhyakumari)

Share: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ   (Udupi\kaup) ಕಾಪು: ನಾಡಿನಲ್ಲಿ ಉತ್ತಮವಾಗಿ ಮಳೆ ಬೆಳೆಯಾಗಿ ಸುಖ ಸಮೃದ್ಧಿಯಾಗಲಿ, ಎಲ್ಲರಿಗೂ ನೆಮ್ಮದಿಯ ಬದುಕನ್ನು ಕೊಡುವಂತೆ ದೇವರಲ್ಲಿ ಕೇಳಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಪ್ರಾರ್ಥಿಸಿದರು. (kapu shree hosamarigudi temple) ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ […]

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

  (Udupi\kaup) ಕಾಪು: ನಾಡಿನಲ್ಲಿ ಉತ್ತಮವಾಗಿ ಮಳೆ ಬೆಳೆಯಾಗಿ ಸುಖ ಸಮೃದ್ಧಿಯಾಗಲಿ, ಎಲ್ಲರಿಗೂ ನೆಮ್ಮದಿಯ ಬದುಕನ್ನು ಕೊಡುವಂತೆ ದೇವರಲ್ಲಿ ಕೇಳಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಪ್ರಾರ್ಥಿಸಿದರು.

(kapu shree hosamarigudi temple) ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸಂಯುಕ್ತವಾಗಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಆಯೋಜಿಸಿರುವ ಸಾಂಸ್ಕöÈತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಮೈಸೂರಿನಲ್ಲಿ ನಾಡದೇವಿ ಚಾಮುಂಡೇಶ್ವರಿ ಪೂಜೆ ಸಲ್ಲಿಕೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿಯೂ ದೇವಿ ಆರಾಧನೆ ಮಾಡಿದ್ದೇವೆ. ಅಭಿವೃದ್ಧಿ ಸಮಿತಿ ಆಶಯದಂತೆ ಹೊಸಮಾರಿಗುಡಿ ನಿರ್ಮಾಣ ನಿಗದಿತ ಕಾಲಾವಧಿಯಲ್ಲಿ  ಪೂರ್ಣಗೊಳ್ಳಲಿ. ಅದನ್ನು ಪೂರ್ಣಗೊಳಿಸುವ ಶಕ್ತಿಯನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ಹಾರೈಸಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಮಾತನಾಡಿ, ದುಷ್ಟತನ ನಾಶವಾಗಿ ಎಲ್ಲರಿಗೂ ಒಳಿತಾಗಲಿ. ಜೀವನದಲ್ಲಿ ಪಾರದರ್ಶಕವಾಗಿ ಸತ್ಯದ ಕಡೆ ಕೆಲಸ ಮಾಡಿದಲ್ಲಿ ಖಂಡಿತ ಲೋಕಕಲ್ಯಾಣವಾಗುತ್ತದೆ ಎಂದರು.

ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಆರ್‌ಜಿ ಗ್ರೂಫ್‌ನ ನಿರ್ದೇಶಕಿ ಆಶಾ ಪ್ರಕಾಶ್ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಉದ್ಯಮಿ ಇಂದಿರಾ ಎಸ್. ಬಲ್ಲಾಳ್, ಪ್ರಿಯಾಂಕ ಸುನಿಲ್ ಕುಮಾರ್ ಕಾರ್ಕಳ, ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್ ಶಿವಪುರ ಜತೆಗೂಡಿ ಕಾರ್ಯಕ್ರಮ ಉದ್ಘಾಟಿಸಿದರು.

ದೇಣಿಗೆ ಸಮರ್ಪಣೆ ಸಂಬಂಧಿಸಿ ಆರಂಭಿಸಿರುವ ವೆಬ್‌ಸೈಟ್‌ಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ನವರಾತ್ರಿಯ ಪ್ರಥಮ ದಿನ ಹಮ್ಮಿಕೊಂಡಿರುವ ಮಹಿಳೆಯರ ರಾಜ್ಯ ಮಟ್ಟದ ನವಶಕ್ತಿ ವೈಭವ ಭೂಷಣ/ ನೃತ್ಯ ರೂಪಕ ಸ್ಪರ್ಧೆಯಲ್ಲಿ ೨೪ ತಂಡಗಳು ಪಾಲ್ಗೊಂಡಿದ್ದವು.

(kapu mla gurme suresh Shetty) ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಚ್.ಎಸ್. ಬಲ್ಲಾಳ್, ತಹಸೀಲ್ದಾರ್ ನಾಗರಾಜ್ ವಿ. ನಾಯ್ಕಡ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ., ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗಂಗಾಧರ ಸುವರ್ಣ, ಮಾಧವ ಆರ್. ಪಾಲನ್, ಮನೋಹರ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ ಮತ್ತಿತರರು ಇದ್ದರು.

 ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

 ನೀಲಾನಂದ ನಾಯ್ಕ್, ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.