• Home  
  • ಕಾಪು ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕದಿಂದ ಶಾಶ್ವತ ಯೋಜನೆ ಲೋಕಾರ್ಪಣೆ (JCI Kaup unit launches permanent project on Kaup beach)
- social work - ಸಂಘ, ಸಂಸ್ಥೆಗಳು

ಕಾಪು ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕದಿಂದ ಶಾಶ್ವತ ಯೋಜನೆ ಲೋಕಾರ್ಪಣೆ (JCI Kaup unit launches permanent project on Kaup beach)

Share: ಕಾಪು ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕದಿಂದ ಶಾಶ್ವತ ಯೋಜನೆ ಲೋಕಾರ್ಪಣೆ ಅಧ್ಯಕ್ಷತೆ ವಹಿಸಿದ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ   ಕಾಪು: ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಭಾನುವಾರ ಕಾಪು ಲೈಟ್ ಹೌಸ್  ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ “ಐ ಲವ್ ಕಾಪು” ಎಲ್ಈಡಿ ಫಲಕವನ್ನು ಲೋಕಾರ್ಪಣೆ ಗೈದು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ […]

ಕಾಪು: ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಭಾನುವಾರ ಕಾಪು ಲೈಟ್ ಹೌಸ್  ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ “ಐ ಲವ್ ಕಾಪು” ಎಲ್ಈಡಿ ಫಲಕವನ್ನು ಲೋಕಾರ್ಪಣೆ ಗೈದು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರಿಸಿದರು.  

 ಭರತ್ ಎನ್. ಆಚಾರ್ಯ ಘಟಕವನ್ನು ಉದ್ದೇಶಿಸಿ ಮಾತನಾಡಿ, 29 ವರ್ಷಗಳನ್ನು ಪೂರೈಸಿರುವ ಕಾಪು ಘಟಕ, ಜೇಸಿಐ ಗೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ಪ್ರತೀ ವರ್ಷ ಸಾರ್ವಜನಿಕರಿಗೆ ಶಾಶ್ವತ ಯೋಜನೆಯನ್ನು ನೀಡುತ್ತಿರುವ ಈ ಘಟಕ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಸಂಶನೆಗೈದರು.

   ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಕಾಪು ಘಟಕ ಬಹಳಷ್ಟು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ವಲಯ 15ರ ನಂದಿನಿ ಪ್ರಾಂತ್ಯದ ಉಪಾಧ್ಯಕ್ಷ JFD ಅರುಣ್ ಮಂಜ, ಆಡಳಿತ ವಿಭಾಗದ ನಿರ್ದೇಶಕ JCI Sen ಸುಹಾಸ್ ಮರಿಕೆ, ಶಾಶ್ವತ ಯೋಜನೆಯ ವಲಯ ಸಂಯೋಜಕ  ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರುಗಳು, ವಲಯಧಿಕಾರಿಗಳು, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಕಾಪು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಕರ ಸಾಲ್ಯಾನ್, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಸ್ವಾಗತಿಸಿದರು. ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.