• Home  
  • ಕಾಪು : ಹಸಿರು ಪ್ರಕೃತಿ – ಯೋಗ ಸಂಸ್ಕೃತಿ, ಸಸಿ ವಿತರಣೆ. (Kaup: Green nature – Yoga culture, sapling distribution)
- ಪ್ರಚಲಿತ - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಕಾಪು : ಹಸಿರು ಪ್ರಕೃತಿ – ಯೋಗ ಸಂಸ್ಕೃತಿ, ಸಸಿ ವಿತರಣೆ. (Kaup: Green nature – Yoga culture, sapling distribution)

Share: ಕಾಪು : ಹಸಿರು ಪ್ರಕೃತಿ – ಯೋಗ ಸಂಸ್ಕೃತಿ, ಸಸಿ ವಿತರಣೆ. ಯುವವಾಹಿನಿ ಕಾಪು, ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜನೆ (Kaup) ಕಾಪು: ಯುವವಾಹಿನಿ ಕಾಪು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಮಿತಿ ಜಂಟಿ ಆಶ್ರಯದಲ್ಲಿ ಕಾಪು ಬಿಲ್ಲವರ‌ ಸಹಾಯಕ ಸಂಘದ ಸಭಾಭವನದಲ್ಲಿ ಹಸಿರು ಪ್ರಕೃತಿ – ಯೋಗ ಸಂಸ್ಕೃತಿ ಕಾರ್ಯಕ್ರಮ ನಡೆಯಿತು.  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ರವರು ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮದ […]

(Kaup) ಕಾಪು: ಯುವವಾಹಿನಿ ಕಾಪು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಮಿತಿ ಜಂಟಿ ಆಶ್ರಯದಲ್ಲಿ ಕಾಪು ಬಿಲ್ಲವರ‌ ಸಹಾಯಕ ಸಂಘದ ಸಭಾಭವನದಲ್ಲಿ ಹಸಿರು ಪ್ರಕೃತಿ – ಯೋಗ ಸಂಸ್ಕೃತಿ ಕಾರ್ಯಕ್ರಮ ನಡೆಯಿತು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ರವರು ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. 

   ಸಮಾಜದ ಅಭಿವೃದ್ಧಿಯಲ್ಲಿ ಯುವವಾಹಿನಿಯ ಕೊಡುಗೆ ಸ್ಮರಣೀಯವಾಗಿದ್ದು, ಕಾಪು ಯುವವಾಹಿನಿ ಘಟಕದ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.

  ವಿಶ್ವ ಪರಿಸರ‌ ದಿನಾಚರಣೆ ಪ್ರಯುಕ್ತ ಉಡುಪಿ ವಲಯ ಅರಣ್ಯಾಧಿಕಾರಿ ಕೇಶವ ಪೂಜಾರಿ ಅವರಿಂದ ಉಪನ್ಯಾಸ ಕಾರ್ಯಕ್ರಮ‌ ನಡೆಯಿತು.

  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಡುಪಿ ವಲಯದ ಮುಖ್ಯ ಶಿಕ್ಷಕ, ಆರ್ ಜಿ. ಬಿರಾದಾರ್ ಯೋಗದ ಮಹತ್ವವನ್ನು ವಿವರಿಸಿದರು.

 ಈ ಸಂದರ್ಭ ಎಲ್ಲರಿಗೂ ಸಸಿ ವಿತರಿಸಲಾಯಿತು.

  ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು.

 ಕಾಪು ಬಿಲ್ಲವರ ಸಹಾಯಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ‌ ಸುವರ್ಣ, ಪತಂಜಲಿ ಯೋಗ‌ ಸಮಿತಿಯ ಜನಾರ್ದನ ಸಾಲ್ಯಾನ್, ದಿನೇಶ್ ದೇವಾಡಿಗ, ಬಡಾ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಸುಕೇಶ್ ಎರ್ಮಾಳು, ಯುವವಾಹಿನಿ ಪೂರ್ವಾಧ್ಯಕ್ಷ ದೀಪಕ್ ಕುಮಾರ್‌ ಎರ್ಮಾಳು, ಸಚಿನ್ ಕುಮಾರ್ ಉಪಸ್ಥಿತರಿದ್ದರು.

  ಯುವವಾಹಿನಿ ಕಾಪು ಘಟಕದ ನಿಕಟ ಪೂರ್ವ ಅಧ್ಯಕ್ಷ ಸೂರ್ಯನಾರಾಯಣ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಎಸ್. ಪೂಜಾರಿರವರು ವಂದಿಸಿದರು. ಸದಸ್ಯ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.