• Home  
  • ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ  ಯುವಕ ಆತ್ಮಹತ್ಯೆ (Youth commits suicide by jumping from Papanashini bridge in Udyavara)
- ಆತ್ಮಹತ್ಯೆ

ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ  ಯುವಕ ಆತ್ಮಹತ್ಯೆ (Youth commits suicide by jumping from Papanashini bridge in Udyavara)

Share: ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ  ಯುವಕ ಆತ್ಮಹತ್ಯೆ ಮಂಗಳವಾರ ಸಂಜೆ  ಮೃತದೇಹ ಪತ್ತೆ  (Udhyavara) ಉದ್ಯಾವರ : ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಮಂಗಳವಾರ ಪತ್ತೆಯಾಗಿದೆ.   ಮೃತ ಯುವಕ ಉದ್ಯಾವರ ಪಿತ್ರೋಡಿಯ ನಿವಾಸಿ ಹರ್ಷಿತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಮೃತ ಹರ್ಷಿತ್‌ ಮಲ್ಪೆಯ ಸಂಸ್ಥೆಯೊಂದರಲ್ಲಿ  ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯಾವರ ಪಾಪನಾಶಿನಿ ಸೇತುವೆಯ ಬಳಿ ದ್ವಿಚಕ್ರ ವಾಹನವನ್ನಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.    ಮೃತ ಹರ್ಷಿತ್‌ […]

 (Udhyavara) ಉದ್ಯಾವರ : ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಮಂಗಳವಾರ ಪತ್ತೆಯಾಗಿದೆ.

  ಮೃತ ಯುವಕ ಉದ್ಯಾವರ ಪಿತ್ರೋಡಿಯ ನಿವಾಸಿ ಹರ್ಷಿತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.

ಮೃತ ಹರ್ಷಿತ್‌ ಮಲ್ಪೆಯ ಸಂಸ್ಥೆಯೊಂದರಲ್ಲಿ  ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯಾವರ ಪಾಪನಾಶಿನಿ ಸೇತುವೆಯ ಬಳಿ ದ್ವಿಚಕ್ರ ವಾಹನವನ್ನಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

   ಮೃತ ಹರ್ಷಿತ್‌ ಮನೆಯಲ್ಲಿ ಸೋಮವಾರ ರಾತ್ರಿ ಊಟ ಮಾಡಿ 10 ಗಂಟೆಗೆ ಮಲಗಿದ್ದನು. ಮಂಗಳವಾರ ಬೆಳಿಗ್ಗೆ  6 ಗಂಟೆಗೆ ಮನೆಯವರು ನೋಡಿದಾಗ ಆತನು ಮನೆಯಲ್ಲಿರಲಿಲ್ಲ. ಆತನ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯವರು ಮತ್ತು ಮಿತ್ರರು ಹುಡುಕಾಡಿದಾಗ ದ್ವಿಚಕ್ರ ಉಡುಪಿ -ಮಂಗಳೂರು ಕಡೆ ಸಾಗುವ ಉದ್ಯಾವರ ಸೇತುವೆಯ ಬಳಿ  ಪತ್ತೆಯಾಗಿತ್ತು.

  ಯುವಕನ ಪತ್ತೆಗಾಗಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಸಹಿತ ಹಲವರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಸಂಜೆ ಮೃತ ಹರ್ಷಿತ್‌ ನ ಮೃತದೇಹ ಪತ್ತೆ ಆಗಿದೆ.

ಉದ್ಯಾವರದ ರಮೇಶ್ ಮತ್ತು ಪ್ರಮೋದಿನಿ ಶೆಟ್ಟಿ ಪುತ್ರನಾಗಿರುವ ಇವರು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

 ಮೃತರ ಅಣ್ಣ ಜಿತೇಶ್ ಶೆಟ್ಟಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.