• Home  
  • ಕಾಪು: 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ಸಮಾರೋಪ (Kaup: 9th Karnataka State School Chess Championship concludes)
- ಕ್ರೀಡೆ

ಕಾಪು: 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ಸಮಾರೋಪ (Kaup: 9th Karnataka State School Chess Championship concludes)

Share: ಕಾಪು: 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ಸಮಾರೋಪ ವಿವಿಧ ಜಿಲ್ಲೆಗಳಿಂದ ಒಟ್ಟು 390 ಚೆಸ್‌ ಆಟಗಾರರ ಉಪಸ್ಥಿತಿ (Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು,  ಅಫಿಲಿಯೆನ್ಸ್ ಟೆಕ್ನಾಲಜಿ ಮಂಗಳೂರು ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಆಶ್ರಯದಲ್ಲಿ ನಡೆದ 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ಸಮಾರೋಪ ಸಮಾರಂಭವು ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ಭಾನುವಾರ ಸಂಜೆ ಜರುಗಿತು.  ವಿವಿಧ […]

(Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು,  ಅಫಿಲಿಯೆನ್ಸ್ ಟೆಕ್ನಾಲಜಿ ಮಂಗಳೂರು ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಆಶ್ರಯದಲ್ಲಿ ನಡೆದ 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ಸಮಾರೋಪ ಸಮಾರಂಭವು ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ಭಾನುವಾರ ಸಂಜೆ ಜರುಗಿತು.

 ವಿವಿಧ ಜಿಲ್ಲೆಗಳಿಂದ ಒಟ್ಟು 390 ಆಟಗಾರರು ಭಾಗವಹಿಸಿದರು. ಒಟ್ಟು 12 ವಿಭಾಗದಲ್ಲಿ ಸ್ಪರ್ಧೆ ನಡೆದು ಪ್ರತೀ ವಿಭಾಗದಲ್ಲಿ 2 ರಂತೆ 24 ಆಟಗಾರರು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.  

 ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದಂಡತೀರ್ಥ ಪ್ರತಿಷ್ಠಾನ ಕಾಪು ಇದರ ಅಧ್ಯಕ್ಷ ಡಾ. ಸೀತಾರಾಮ ಭಟ್ ವಹಿಸಿದ್ದರು.

  ಬಹುಮಾನ ವಿತರಕರಾಗಿ ಮಂಗಳೂರು ಅಫಿಲೆನ್ಸ್ ಟೆಕ್ನಾಲಜಿಯ ಸ್ಥಾಪಕ ಅವಿನಾಶ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಇದರ ಮೊಕ್ತೇಸರ ರಾಮ್ ನಾಯಕ್ ಮೊಕ್ತೇಸರ ಯುವವಾಹಿನಿ ಕಾಪು ಘಟಕದ ಕಾರ್ಯದರ್ಶಿ ಸುನಿಲ್ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿದ್ದಕೃಷ್ಣ, ಬಾಬು ಜೆ ಪೂಜಾರಿ ಉಪ್ಪುಂದ, ನಾಗೇಶ್ ಕಾರಂತ್ ಪಾಂಗಳ, ಉಮಾನಾಥ ಕಾಪು, ಲೋಕೇಶ್ ಬೆಳ್ಚಡ ಉಪಸ್ಥಿತರಿದ್ದರು.

  ನಿರ್ದೇಶಕಿ ಸೌಂದರ್ಯ ಯು ಕೆ ಸ್ವಾಗತಿಸಿದರು. ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಸ್ಥಾಪಕ ಸಾಕ್ಷಾತ್ ಯು ಕೆ ನಿರೂಪಿಸಿದರು. ಉಮಾನಾಥ ಕಾಪು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.