• Home  
  • ಕಾರ್ಕಳ ರಸ್ತೆ ಸಾಣೂರು ಪಿಲಿಕಲ್ಲು ಎಂಬಲ್ಲಿ  ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ (Leopard spotted at Sanur Pilikallu on Karkala Road, causing panic among people)
- ಪ್ರಚಲಿತ

ಕಾರ್ಕಳ ರಸ್ತೆ ಸಾಣೂರು ಪಿಲಿಕಲ್ಲು ಎಂಬಲ್ಲಿ  ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ (Leopard spotted at Sanur Pilikallu on Karkala Road, causing panic among people)

Share: ಕಾರ್ಕಳ ರಸ್ತೆ ಸಾಣೂರು ಪಿಲಿಕಲ್ಲು ಎಂಬಲ್ಲಿ  ಕಾಣಿಸಿಕೊಂಡ ಚಿರತೆ, ಜನರಲ್ಲಿ ಆತಂಕ   ಸಂದೀಪ್ ಪೂಜಾರಿ ಪಿಲಿಕಲ್ಲು ಎಂಬುವರಿಗೆ ಕಂಡ ಚಿರತೆ (Karkala) ಕಾರ್ಕಳ : ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಿಲಿಕಲ್ಲು ಎಂಬಲ್ಲಿ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.   ಸಂದೀಪ್ ಪೂಜಾರಿ ಪಿಲಿಕಲ್ಲು ಎಂಬುವರು ಕಾರ್ಕಳ ಪೇಟೆಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಚಿರತೆಯೊಂದು ಅವರಿಗೆ ಕಾಣಿಸಿಕೊಂಡಿದ್ದು, ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಅವರು […]

(Karkala) ಕಾರ್ಕಳ : ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಿಲಿಕಲ್ಲು ಎಂಬಲ್ಲಿ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.

  ಸಂದೀಪ್ ಪೂಜಾರಿ ಪಿಲಿಕಲ್ಲು ಎಂಬುವರು ಕಾರ್ಕಳ ಪೇಟೆಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಚಿರತೆಯೊಂದು ಅವರಿಗೆ ಕಾಣಿಸಿಕೊಂಡಿದ್ದು, ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಅವರು ಸೆರೆಹಿಡಿದಿದ್ದಾರೆ.

 ಈ ರಸ್ತೆಯ ಸ್ವಲ್ಪ ದೂರದಲ್ಲಿಯೇ, ಶಿಕ್ಷಣ ಸಂಸ್ಥೆಯಿದ್ದು ಮಕ್ಕಳು ಮತ್ತು ಜನರು ಓಡಾಡುವ ಪ್ರದೇಶವಾಗಿದ್ದು  ಆತಂಕಕ್ಕೆ ಕಾರಣವಾಗಿದೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.