• Home  
  • ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ(Gauri Fastival Celebration of women in the month of Karthika)
- fastival - ಧಾರ್ಮಿಕ

ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ(Gauri Fastival Celebration of women in the month of Karthika)

Share: ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ (Vijaya Nagara, Koodligi) ವಿಜಯನಗರ, ಕೂಡ್ಲಿಗಿ: ಕಾರ್ತೀಕ ಮಾಸದ ಹೊಸ್ತಿಲ ಹುಣ್ಣಿಯ ನಂತರ, ತಿದಿಗಿಯಂದು ಆಚರಿಸಲಾಗುವ ಹೆಂಗಳೆಯ ವಿಶೇಷ ಹಬ್ಬ ಗೌರಿ ಹುಣ್ಣಿಮೆಯಂದು ವಿಜೃಂಭಣೆಯಿಂದ ಆಚರಿಸಲಾಯಿತು.  ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ  ಮಹಿಳೆಯರು, ಯುವತಿಯರು, ಮಕ್ಕಳು, ಬಾಲೆಯರು ಅತ್ಯಂತ ಸಂಭ್ರಮದಿಂದ ಗೌರಿ ಹಬ್ಬವನ್ನು ಆಚರಿಸಿದರು. ಗೌರಿಯನ್ನು ಕೂರಿಸಿ ಗೌರಿಗೆ ಚೆಂಡು, ಸೇವಂತಿಗೆ ಹಾಗೂ ಅಂಬರ ಹೂವುಗಳಿಂದ ಅಲಂಕರಿಸಿ ಆರಾಧಿಸಲಾಗುತ್ತದೆ. ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಗೊಂಬೆ […]

ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ

(Vijaya Nagara, Koodligi) ವಿಜಯನಗರ, ಕೂಡ್ಲಿಗಿ: ಕಾರ್ತೀಕ ಮಾಸದ ಹೊಸ್ತಿಲ ಹುಣ್ಣಿಯ ನಂತರ, ತಿದಿಗಿಯಂದು ಆಚರಿಸಲಾಗುವ ಹೆಂಗಳೆಯ ವಿಶೇಷ ಹಬ್ಬ ಗೌರಿ ಹುಣ್ಣಿಮೆಯಂದು ವಿಜೃಂಭಣೆಯಿಂದ ಆಚರಿಸಲಾಯಿತು.

 ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ  ಮಹಿಳೆಯರು, ಯುವತಿಯರು, ಮಕ್ಕಳು, ಬಾಲೆಯರು ಅತ್ಯಂತ ಸಂಭ್ರಮದಿಂದ ಗೌರಿ ಹಬ್ಬವನ್ನು ಆಚರಿಸಿದರು.

ಗೌರಿಯನ್ನು ಕೂರಿಸಿ ಗೌರಿಗೆ ಚೆಂಡು, ಸೇವಂತಿಗೆ ಹಾಗೂ ಅಂಬರ ಹೂವುಗಳಿಂದ ಅಲಂಕರಿಸಿ ಆರಾಧಿಸಲಾಗುತ್ತದೆ.

ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಗೊಂಬೆ ಹಾಗೂ ದೀಪಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ.

ಹಾಲ ಬೆಳದಿಂಗಳ ಬೆಳಕಲ್ಲಿ  ಮಕ್ಕಳು, ಮಹಿಳೆಯರು ಶೃಂಗಾರಗೊಂಡು, ತಟ್ಟೆಗಳಲ್ಲಿ ಆರತಿ ಹಾಗೂ ದೀಪಗಳನ್ನು ಹಚ್ಚಿ ಗೌರಿಗೆ ಆರತಿ ಮಾಡಲು ಗೌರಿಯನ್ನು ಪ್ರತಿಷ್ಠಾಪಿಸಲಾಗಿರುವಲ್ಲಿಗೆ ತೆರಳುತ್ತಾರೆ. ಗೌರಿಗೆ ಸಕ್ಕರೆ ಆರತಿ ಬೆಳಗುವ ಸೊಬಗನ್ನು ಕಣ್ತುಂಬಿಸಿಕೊಳ್ಳುವುದೇ ಮಹದಾನಂದ.

 ಆರತಿಯನ್ನು ಹೆಂಗಸರು ಬೆಳಗುವಾಗ, ಗೌರಿಯ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಹೊಸ್ತಿಲ ಹುಣ್ಣಿಮೆಯಂದು ವಿಧಿವತ್ತಾಗಿ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದ ಪ್ರತಿ ದಿನ ಸಂಜೆ ಗೌರಿ ಆರಾಧನೆ ಜರುಗುತ್ತದೆ. ಹಲವೆಡೆಗಳಲ್ಲಿ ಪ್ರತಿಷ್ಠಾಸಿದ ದಿನದಂದೇ ಆರತಿ ಬೆಳಗುತ್ತಾರೆ. ಬಹುತೇಕ ಕಡೆಗಳಲ್ಲಿ ಮೂರು ದಿನಗಳ ಕಾಲ ಗೌರಿಯನ್ನು ಕೂಡಿಸುತ್ತಾರೆ. ಇನ್ನು ಹಲವೆಡೆಗಳಲ್ಲಿ ಐದು ದಿನಗಳ ಕಾಲ ಆರಾಧಿಸಲಾಗುತ್ತದೆ.

ಜನರಿಗೆ ಅನುಕೂಲ ಆಗುವ ದಿನದಲ್ಲಿ, ಗೌರಿಗೆ ಸಕ್ಕರೆ ಆರತಿ ಬೆಳಗಿ ಆರಾಧಿಸಲಾಗುತ್ತದೆ.

ಪದ್ಧತಿಯಂತೆ ಕೂಡ್ಲಿಗಿ ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಪಟ್ಟಣದ 10ನೇ ವಾರ್ಡಿನ ಜಂಗಮರ ಮನೆಯಲ್ಲಿ ಗೌರಿ ಪ್ರತಿಷ್ಠಾಪಿಸಲಾಗಿತ್ತು.  ಇದೇ ರೀತಿ  ಗ್ರ‍ಾಮೀಣ ಪ್ರದೇಶಗಳಲ್ಲಿ ಗ್ರಾಮದ ಪ್ರಮುಖ ದೇವಸ್ಥಾನದ ಅಂಗಳದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ.

ಹೆಣ್ಣು ಮಕ್ಕಳು, ಯುವತಿಯರು, ಮಹಿಳೆಯರು ಗ್ರಾಮದ ಗೌರಿ ಪ್ರತಿಷ್ಠಾಪಿಸಿರುವೆಡೆ ತೆರಳಿ ಗೌರಿಗೆ ಸಕ್ಕರೆ ಆರತಿ ಬೆಳಗುತ್ತಾರೆ. ಅಂತಿಮ ದಿನದಂದು ರಾತ್ರಿ ಗೌರಿಯನ್ನು  ನಿಯಮಾವಳಿಯಂತೆ ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ.

 ಇದಕ್ಕೂ ಮುನ್ನ  ಮಹಿಳೆಯರು ಗೌರಿಯನ್ನು ತಮ್ಮ ತಲೆಯ ಮೇಲೆ ಕೂಡಿಸಿಕೊಂಡು, ಗೌರಿಯ ಕುರಿತು ಹಾಡು ಹೇಳುವ ಸಂಪ್ರದಾಯವಿದೆ.

 ಗೌರಿಯನ್ನು ಗಂಗೆ ಕಾಣಿಸಿದ ಮರುದಿನವೇ ಗೌರಿ ಮಕ್ಕಳು ಸಂಬಂಧಿಕರ ಮನೆ, ಮನೆಗೆ ತೆರಳಿ ಕೋಲಾಟ ಆಡುತ್ತಾರೆ.  ಆರತಿ ಬೆಳಗಿ ಅವರಿಂದ ಉಡುಗೊರೆ ಪಡೆಯುವುದರ ಮೂಲಕ, ಹಬ್ಬವನ್ನು ಬಹು ಸಂಭ್ರಮದಿಂದ ಆಚರಿಸಲಾಗುತ್ತದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.