• Home  
  • ಕಾಸರಗೋಡಿನಲ್ಲಿ ಮರಳು ಮಾಫಿಯಾದೊಂದಿಗೆ ನಿಕಟ ನಂಟು: ಏಳು ಮಂದಿ ಪೊಲೀಸರು ಸೇವೆಯಿಂದ ವಜಾ
- ಅಪರಾಧ

ಕಾಸರಗೋಡಿನಲ್ಲಿ ಮರಳು ಮಾಫಿಯಾದೊಂದಿಗೆ ನಿಕಟ ನಂಟು: ಏಳು ಮಂದಿ ಪೊಲೀಸರು ಸೇವೆಯಿಂದ ವಜಾ

Share: ಕಾಸರಗೋಡು: ಮರಳು ಮಾಫಿಯಾದೊಂದಿಗೆ ನಿಕಟ ನಂಟು ಹೊಂದಿದ್ದ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕಾಸರಗೋಡು ಚಂದೇರಾ ಪೊಲೀಸ್‌ ಠಾಣೆಯ ಟಿ.ಎಂ. ಅಬ್ದುಲ್‌ ರಶೀದ್‌ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್‌, ಗ್ರೇಡ್‌ ಎಸ್‌ಐಗಳಾದ ಕಣ್ಣೂರು ರೂರಲ್‌ನ ಸಿ. ಗೋಕುಲನ್‌, ಕಲ್ಲಿಕೋಟೆ ರೂರಲ್‌ನ ಪಿ. ಜೋಯಿ ಥೋಮಸ್‌, ಸಿವಿಲ್‌ ಪೊಲೀಸ್‌ ಆಫೀಸರ್‌ಗಳಾದ ಪಿ.ಎ. ನಿಸಾರ್‌ (ಕಣ್ಣೂರು ಸಿಟಿ), ಎಂ.ವೈ. ಶಿಬಿನ್‌ (ಕಲ್ಲಿಕೋಟೆ ರೂರಲ್‌) ಮತ್ತು ಪಿ.ಎ. ಶಜೀರ್‌ […]

ಕಾಸರಗೋಡು: ಮರಳು ಮಾಫಿಯಾದೊಂದಿಗೆ ನಿಕಟ ನಂಟು ಹೊಂದಿದ್ದ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಸರಗೋಡು ಚಂದೇರಾ ಪೊಲೀಸ್‌ ಠಾಣೆಯ ಟಿ.ಎಂ. ಅಬ್ದುಲ್‌ ರಶೀದ್‌ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್‌, ಗ್ರೇಡ್‌ ಎಸ್‌ಐಗಳಾದ ಕಣ್ಣೂರು ರೂರಲ್‌ನ ಸಿ. ಗೋಕುಲನ್‌, ಕಲ್ಲಿಕೋಟೆ ರೂರಲ್‌ನ ಪಿ. ಜೋಯಿ ಥೋಮಸ್‌, ಸಿವಿಲ್‌ ಪೊಲೀಸ್‌ ಆಫೀಸರ್‌ಗಳಾದ ಪಿ.ಎ. ನಿಸಾರ್‌ (ಕಣ್ಣೂರು ಸಿಟಿ), ಎಂ.ವೈ. ಶಿಬಿನ್‌ (ಕಲ್ಲಿಕೋಟೆ ರೂರಲ್‌) ಮತ್ತು ಪಿ.ಎ. ಶಜೀರ್‌ (ಕಣ್ಣೂರು ರೂರಲ್‌) ಸೇವೆಯಿಂದ ವಜಾಗೊಂಡವರು ಎಂದು ತಿಳಿಯಲಾಗಿದೆ.

ಈ 7 ಮಂದಿ ತ್ರಿಶೂರು ಠಾಣೆಯಲ್ಲಿದ್ದಾಗ ಅಲ್ಲಿನ ಮರಳು ಮಾಫಿಯಾ ದೊಂದಿಗೆ ನಿಕಟ ನಂಟು ಬೆಳೆಸಿ, ಅವರಿಗೆ ಅಕ್ರಮ ಮರಳು ಸಾಗಾಟಕ್ಕೆ ಅಗತ್ಯ ಸಹಾಯ ಒದಗಿಸಿದ ಆರೋಪ ಎದುರಿಸುತ್ತಿದ್ದರು ಎನ್ನಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.