ಕುಂತಳನಗರ : ಬಂಟರ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಬೃಹತ್ ಉದ್ಯೋಗ ಮೇಳ
ಯುವ ಜನತೆಯ ಬದುಕು ರೂಪಿಸುವಲ್ಲಿ ಕುಂತಳನಗರ ಬಂಟರ ಸಂಘ ಸದೃಡ.
(Kunthala Nagara) ಕುಂತಳನಗರ : ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ 4ನೇ ಬೃಹತ್ ಉದ್ಯೋಗ ಮೇಳವು ಮಣಿಪುರ ಕುಂತಳನಗರದ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನೆರವೇರಿತು.
ಉದ್ಯೋಗ ಮೇಳವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಅವರು ಮಾತಮಾಡಿ, ನಿರುದ್ಯೋಗಿಗಳ ಜೀವನವನ್ನು ಭದ್ರವಾಗಿ ರೂಪಿಸಿಕೊಳ್ಳುವಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಬೃಹತ್ ಉದ್ಯೋಗ ಮೇಳದ ಆಯೋಜನೆಯಿಂದ ಪರಿಣಾಮಕಾರಿ ಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪ್ರತಿಭೆಗಳಿಗೆ ಸದವಕಾಶವನ್ನು ನೀಡಿ ಮನೆ ಮನೆಯನ್ನು ಬೆಳಗುವ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಕಾಯಕ ನಿರಂತರವಾಗಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಂಆರ್ ಜಿ ಗ್ರೂಪ್ ನ ಈಶ್ವರ್ ಪ್ರಸಾದ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಣಿಪಾಲ ಎಚ್.ಪಿ.ಆರ್. ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ಚೆಯರ್ಮ್ಯಾನ್ ಹರಿಪ್ರಸಾದ್ ರೈ, ಬೆಂಗಳೂರು ಕೈಗಾರಿಕೋದ್ಯಮಿ ವಿಜಯ ಹೆಗ್ಡೆ, ಇತರ ಗಣ್ಯರು ಮಾತನಾಡಿದರು.
ಉದ್ಯೋಗ ಮೇಳದ ಚೇರ್ಮನ್ ಡಾ. ದಿವ್ಯರಾಣಿ ಪ್ರದೀಪ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ. ಶೆಟ್ಟಿ, ಮಣಿಪಾಲದ ಉಡುಪಿ ಗ್ರೂಪ್ ಆಫ್ ಪ್ರೊಫೆಶನಲ್ ಸ್ಟಡೀಸ್ ವೈಸ್ ಪ್ರಾಂಶುಪಾಲ ಪ್ರೊ. ಶರತ್ ಎಸ್. ಆಳ್ವ, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕೊಚಿನ್ ಶಿಪ್ ಯಾರ್ಡ್ ಸಿಇಒ ಹರಿಕುಮಾರ್ ಎ., ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಯೋಗೀಶ್ ವಿ. ಶೆಟ್ಟಿ ಕಾಪು, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ, ದಯಾನಂದ ಆರ್. ಶೆಟ್ಟಿ, ರಂಜನಿ ಹೆಗ್ಡೆ ಇದ್ದರು.
ಟ್ರಸ್ಟ್ ನ ಕೋಶಾಧಿಕಾರಿ, ಸಂಯೋಜಕ ವಿಜಿತ್ ಶೆಟ್ಟಿ ವಂದಿಸಿದರು.
ಕಾರ್ಯಕ್ರಮ ನಿರ್ದೇಶಕ ಡಾ. ಸುಧೀರ್ ರಾಜ್ ನಿರೂಪಿಸಿದರು.

