• Home  
  • ಕುಂದಾಪುರ : ಆಂಬುಲೆನ್ಸ್ ನಲ್ಲೇ ಬಂದು ಮತದಾನ ಮಾಡಿದ ಅನಾರೋಗ್ಯ ಪೀಡಿತ ವೃದ್ಧೆ (Voting)
- health - ಕರಾವಳಿ

ಕುಂದಾಪುರ : ಆಂಬುಲೆನ್ಸ್ ನಲ್ಲೇ ಬಂದು ಮತದಾನ ಮಾಡಿದ ಅನಾರೋಗ್ಯ ಪೀಡಿತ ವೃದ್ಧೆ (Voting)

Share: ಕುಂದಾಪುರ ; ಆಂಬುಲೆನ್ಸ್ ನಲ್ಲೇ ಬಂದು ಮತದಾನ ಮಾಡಿದ ಅನಾರೋಗ್ಯಪೀಡಿತ ವೃದ್ಧೆ! ಕುಂದಾಪುರ: ಜಿಲ್ಲೆಯಾದ್ಯಂತ ಮತದಾನ ಸುಸೂತ್ರವಾಗಿ ನಡೆಯುತ್ತಿದೆ. ಮೂರು ಗಂಟೆ ವೇಳೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ. ಐವತ್ತರಷ್ಟು ಮತದಾನವಾಗಿದೆ. ಹಲವೆಡೆ ಹಿರಿಯ ನಾಗರೀಕರು ಮತ್ತು ಅಂಗವಿಕಲರು ಮತಗಟ್ಟೆಗಳತ್ತ ಆಗಮಿಸಿ ಮತ ಚಲಾಯಿಸುವುದು ಕಂಡು ಬಂತು. ಈ ಮಧ್ಯೆ ಕುಂದಾಪುರ ಕೋಯಕುಟ್ಟಿ ಹಾಲ್ ಸಮೀಪದ 21ನೇ ಮತಗಟ್ಟೆಯಲ್ಲಿ ಅನಾರೋಗ್ಯಪೀಡಿತ ವೃದ್ಧೆಯೊಬ್ಬರು ಆಂಬುಲೆನ್ಸ್ ನಲ್ಲಿ ಆಗಮಿಸಿ ಮತದಾನ ಮಾಡುವ ಮೂಲಕ ಜನತೆಗೆ ಉತ್ತಮ ಸಂದೇಶ ನೀಡಿದ್ದಾರೆ. […]

ಕುಂದಾಪುರ ;

ಆಂಬುಲೆನ್ಸ್ ನಲ್ಲೇ ಬಂದು ಮತದಾನ ಮಾಡಿದ ಅನಾರೋಗ್ಯಪೀಡಿತ ವೃದ್ಧೆ!

ಕುಂದಾಪುರ: ಜಿಲ್ಲೆಯಾದ್ಯಂತ ಮತದಾನ ಸುಸೂತ್ರವಾಗಿ ನಡೆಯುತ್ತಿದೆ. ಮೂರು ಗಂಟೆ ವೇಳೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ. ಐವತ್ತರಷ್ಟು ಮತದಾನವಾಗಿದೆ. ಹಲವೆಡೆ ಹಿರಿಯ ನಾಗರೀಕರು ಮತ್ತು ಅಂಗವಿಕಲರು ಮತಗಟ್ಟೆಗಳತ್ತ ಆಗಮಿಸಿ ಮತ ಚಲಾಯಿಸುವುದು ಕಂಡು ಬಂತು.

ಈ ಮಧ್ಯೆ ಕುಂದಾಪುರ ಕೋಯಕುಟ್ಟಿ ಹಾಲ್ ಸಮೀಪದ 21ನೇ ಮತಗಟ್ಟೆಯಲ್ಲಿ ಅನಾರೋಗ್ಯಪೀಡಿತ ವೃದ್ಧೆಯೊಬ್ಬರು ಆಂಬುಲೆನ್ಸ್ ನಲ್ಲಿ ಆಗಮಿಸಿ ಮತದಾನ ಮಾಡುವ ಮೂಲಕ ಜನತೆಗೆ ಉತ್ತಮ ಸಂದೇಶ ನೀಡಿದ್ದಾರೆ. ಅನಾರೋಗ್ಯಪೀಡಿತ ತಾಯಿ ವಿ.ಕೆ ಲಲಿತಾ (85) ಅವರನ್ನು ಅಂಬುಲೆನ್ಸ್ ಮೂಲಕ ಕರೆತಂದು ಪುತ್ರ ವಿ. ವಾಸುದೇವ ಹಂದೆ ಮತದಾನ ಮಾಡಿಸಿ ಗಮನ ಸೆಳೆದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.