• Home  
  • ಕುಂದಾಪುರ: ಈಜುಕೊಳದ ನೀರಿನಲ್ಲಿ ಮುಳುಗಿ ಬಾಲಕ ಸಾವು (Kundapura: Boy Drawned in swimming pool)
- ಅಪರಾಧ

ಕುಂದಾಪುರ: ಈಜುಕೊಳದ ನೀರಿನಲ್ಲಿ ಮುಳುಗಿ ಬಾಲಕ ಸಾವು (Kundapura: Boy Drawned in swimming pool)

Share: ಕುಂದಾಪುರ: ಈಜುಕೊಳದ ನೀರಿನಲ್ಲಿ ಮುಳುಗಿ ಬಾಲಕ ಸಾವು (Kundapura) ಕುಂದಾಪುರ : ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಗೆ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿಯೋರ್ವ ಈಜುಕೊಳದ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾನೆ. ಹೊಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ವಿದ್ಯಾರ್ಥಿ.  ಈತ ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ.  ಗುರುವಾರ ಮನೆ ಮಂದಿಯೊಂದಿಗೆ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಈಜಿಕೊಳದ […]

ಕುಂದಾಪುರ: ಈಜುಕೊಳದ ನೀರಿನಲ್ಲಿ ಮುಳುಗಿ ಬಾಲಕ ಸಾವು

(Kundapura) ಕುಂದಾಪುರ : ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಗೆ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿಯೋರ್ವ ಈಜುಕೊಳದ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾನೆ.

ಹೊಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ವಿದ್ಯಾರ್ಥಿ.

 ಈತ ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ.

 ಗುರುವಾರ ಮನೆ ಮಂದಿಯೊಂದಿಗೆ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಈಜಿಕೊಳದ ನೀರಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ.

ಮಗುವಿನ ಸಾವಿಗೆ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಅವರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ.

  ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆಯೆಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ.

 ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.