• Home  
  • ಕುಂದಾಪುರ : ಕಾರು ಅಪಘಾತದಲ್ಲಿಉದ್ಯಾವರ ಐಸಿವೈಎಂ ಅಧ್ಯಕ್ಷ ಧಾರುಣ ಸಾವು (Kundapur: ICYM president of Udyavara Joyisten Castalino died in a car accident)
- ಅಪರಾಧ

ಕುಂದಾಪುರ : ಕಾರು ಅಪಘಾತದಲ್ಲಿಉದ್ಯಾವರ ಐಸಿವೈಎಂ ಅಧ್ಯಕ್ಷ ಧಾರುಣ ಸಾವು (Kundapur: ICYM president of Udyavara Joyisten Castalino died in a car accident)

Share: ಕುಂದಾಪುರ : ಕಾರು ಅಪಘಾತದಲ್ಲಿಉದ್ಯಾವರ ಐಸಿವೈಎಂ ಅಧ್ಯಕ್ಷ ಧಾರುಣ ಸಾವು (Kundapura) ಕುಂದಾಪುರ: ಕುಂದಾಪುರ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತಡರಾತ್ರಿ ಟ್ರಕ್ ಮತ್ತು  ಫಿಗೋ  ಮಧ್ಯೆ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.  ಮೃತಪಟ್ಟ ವ್ಯಕ್ತಿ ಸಂಪಿಗೆನಗರ ನಿವಾಸಿ ರೋಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ ಎಂದು ಗುರುತಿಸಲಾಗಿದೆ. ಜೋಯಿಸ್ಟನ್ ಕ್ಯಾಸ್ಟಲಿನೋವರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ  ಉಡುಪಿ ಕಡೆಗೆ ಬರುತ್ತಿರುವಾಗ ಕೆಟ್ಟು […]

ಕುಂದಾಪುರ : ಕಾರು ಅಪಘಾತದಲ್ಲಿಉದ್ಯಾವರ ಐಸಿವೈಎಂ ಅಧ್ಯಕ್ಷ ಧಾರುಣ ಸಾವು

(Kundapura) ಕುಂದಾಪುರ: ಕುಂದಾಪುರ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತಡರಾತ್ರಿ ಟ್ರಕ್ ಮತ್ತು  ಫಿಗೋ  ಮಧ್ಯೆ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.

 ಮೃತಪಟ್ಟ ವ್ಯಕ್ತಿ ಸಂಪಿಗೆನಗರ ನಿವಾಸಿ ರೋಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ ಎಂದು ಗುರುತಿಸಲಾಗಿದೆ.

ಜೋಯಿಸ್ಟನ್ ಕ್ಯಾಸ್ಟಲಿನೋವರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ  ಉಡುಪಿ ಕಡೆಗೆ ಬರುತ್ತಿರುವಾಗ ಕೆಟ್ಟು ನಿಂತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿಯಲಾಗಿದೆ.

ಅಪಘಾತದಲ್ಲಿ ಜೋಯಿಸ್ಟನ್ ಮೃತಪಟ್ಟಿದ್ದು, ಕಾರಿನಲ್ಲಿದ್ದ ಲಿಸ್ಟನ್ ಪಿಂಟೋ, ಜಸ್ಟಿನ್ ಕಡೋಜ, ವಿಲ್ಸನ್ ಮಾರ್ಟಿಸ್, ಗ್ಲಾಡ್ ಸನ್ ಡಿಸಿಲ್ವ ಗಾಯಗೊಂಡಿದ್ದಾರೆ ಎಂದು ತಿಳಿಸು ಬಂದಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.