• Home  
  • ಕುಖ್ಯಾತ ಹ್ಯಾಕರ್ ಶ್ರೀಕಿ ನಿವಾಸದ ಮೇಲೆ ಎಸ್‌ಐಟಿ ದಾಳಿ
- ಅಪರಾಧ

ಕುಖ್ಯಾತ ಹ್ಯಾಕರ್ ಶ್ರೀಕಿ ನಿವಾಸದ ಮೇಲೆ ಎಸ್‌ಐಟಿ ದಾಳಿ

Share: ಕುಖ್ಯಾತ ಹ್ಯಾಕರ್ ಶ್ರೀಕಿ ನಿವಾಸದ ಮೇಲೆ ಎಸ್‌ಐಟಿ ದಾಳಿ ಬೆಂಗಳೂರು; ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತವನ ಸಹಚರ ಸುನೀಶ್ ಹೆಗ್ಡೆ ನಿವಾಸದ ಮೇಲೆ ಎಸ್‌ಐಟಿ ತಂಡ ಮಂಗಳವಾರ ದಾಳಿ ನಡೆಸಿದೆ.  ನ್ಯಾಯಾಲಯದಿಂದ ಸೋಮವಾರ ಸಂಜೆ ವಾರೆಂಟ್ ಪಡೆದಿದ್ದ ಎಸ್ಐಟಿ ಮಂಗಳವಾರ ಮುಂಜಾನೆಯೇ ಬೆಂಗಳೂರಿನ ಸಂಜಯನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿದೆ.  ನೂರಾರು ಕೋಟಿ ರೂ. ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಶ್ರೀಕೃಷ್ಣ ಈ ಹಿಂದೆ ಸರ್ಕಾರದ […]

ಕುಖ್ಯಾತ ಹ್ಯಾಕರ್ ಶ್ರೀಕಿ ನಿವಾಸದ ಮೇಲೆ ಎಸ್‌ಐಟಿ ದಾಳಿ

ಬೆಂಗಳೂರು; ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತವನ ಸಹಚರ ಸುನೀಶ್ ಹೆಗ್ಡೆ ನಿವಾಸದ ಮೇಲೆ ಎಸ್‌ಐಟಿ ತಂಡ ಮಂಗಳವಾರ ದಾಳಿ ನಡೆಸಿದೆ.

 ನ್ಯಾಯಾಲಯದಿಂದ ಸೋಮವಾರ ಸಂಜೆ ವಾರೆಂಟ್ ಪಡೆದಿದ್ದ ಎಸ್ಐಟಿ ಮಂಗಳವಾರ ಮುಂಜಾನೆಯೇ ಬೆಂಗಳೂರಿನ ಸಂಜಯನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿದೆ.

 ನೂರಾರು ಕೋಟಿ ರೂ. ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಶ್ರೀಕೃಷ್ಣ ಈ ಹಿಂದೆ ಸರ್ಕಾರದ ನೇಮಕಾತಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದ.

 ದೇಶ ವಿದೇಶದ ಪ್ರತಿಷ್ಠಿತ ಸಂಸ್ಥೆಗಳ ವೆಬ್ ಸೈಟ್ ಹ್ಯಾಕ್ ಮಾಡಿ ನೂರಾರು ಕೋಟಿ ರೂ. ಗಳಿಸಿಕೊಂಡಿದ್ದ. ಈ ಹಣವನ್ನು ಬಿಟ್ ಕಾಯಿನ್ ಗೆ ಪರಿವರ್ತಿಸಿದ್ದ. ಡ್ರಗ್ಸ್ ವಹಿವಾಟಿನ ಮೇಲೆ ಸಿಸಿಬಿ ದಾಳಿ ಎಸಗಿದ ಸಂದರ್ಭದಲ್ಲಿ ಈತನ ಹಗರಣ ಬಯಲಿಗೆ ಬಂದಿತ್ತು.

 ಈತನ ಬಳಿ ಇದ್ದ ಬಿಟ್ ಕಾಯಿನ್‌ಗಳನ್ನು ಅಧಿಕಾರಿಗಳ ಮೂಲಕ ವ್ಯಾಲೆಟ್ ನಿಂದ ರಾಜಕಾರಣಿಗಳೇ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.  ಹಲವು ಪ್ರಭಾವಿಗಳೂ ಈತನೊಡನೆ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದ್ದು, ಈತ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ

Leave a comment

Your email address will not be published. Required fields are marked *

eMedia Kannada  @2025. All Rights Reserved.