ಕುಮಾರ್ ಪೆರ್ನಾಜೆ, ಸೌಮ್ಯ ಪೆರ್ನಾಜೆ, ಸವಿತಾ ಕೊಡಂದೂರುರವರು “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ
(Putturu)ಪುತ್ತೂರು: ದಾವಣಗೆರೆಯ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಕೃಷಿಕ ಕುಮಾರ್ ಪೆರ್ನಾಜೆ, ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೃಷಿಕ ರತ್ನ ಪ್ರಶಸ್ತಿ ಪಡೆದ ಸೌಮ್ಯ ಪೆರ್ನಾಜೆ, ಸಂಗೀತ ಕಲಾವಿದೆ ಸವಿತಾ ಕೊಡಂದೂರು ಆಯ್ಕೆ ಆಗಿದ್ದಾರೆ.
ದಾವಣಗೆರೆಯ ಚೆನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲ ಕಲ್ಯಾಣ ಮಂಟಪದಲ್ಲಿ ಏ. 27ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

