• Home  
  • ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ (Koodligi : divotees to Pandarapur by Pada Yathre)
- ಧಾರ್ಮಿಕ

ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ (Koodligi : divotees to Pandarapur by Pada Yathre)

Share: ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ   (Koodligi, Vijayanagara) ಕೂಡ್ಲಿಗಿ: ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿಧಿಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ.  ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀ ಪಾಂಡು ರಂಗ ಸ್ವಾಮಿ ಭಕ್ತರ ಸೇವಾ ಸಮಿತಿ ವತಿಯಿಂದ ಸತತ 11ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು, ಯುವಕರು  ವೃದ್ಧರಾದಿ‌ಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಲೆ ಪಾದಯಾತ್ರೆ ಮೂಲಕ  ತೆರಳಿತು.  ಪ್ರತಿ […]

ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ

  (Koodligi, Vijayanagara) ಕೂಡ್ಲಿಗಿ: ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿಧಿಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ.  ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀ ಪಾಂಡು ರಂಗ ಸ್ವಾಮಿ ಭಕ್ತರ ಸೇವಾ ಸಮಿತಿ ವತಿಯಿಂದ ಸತತ 11ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು, ಯುವಕರು  ವೃದ್ಧರಾದಿ‌ಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಲೆ ಪಾದಯಾತ್ರೆ ಮೂಲಕ  ತೆರಳಿತು.

 ಪ್ರತಿ ದಿನ ಇಪ್ಪತ್ತೈದು – ಮೂವತ್ತು ಕಿಲೋ ಮೀಟರ್   ಪಾದಯಾತ್ರೆ ಮೂಲಕ ಕ್ರಮಿಸುವ ತಂಡ, ದಾರಿಯುದ್ದಕ್ಕೂ ಶ್ರೀರಂಗನ ಜಪ, ತಪ. ನಾಮಸ್ಮರಣೆ ಮಾಡುತ್ತಾ ಸಾಗಲಿದೆ. ಪಂಡರಾಪುರ ಶ್ರೀರಂಗನ ಭಜನೆಗಳನ್ನು ಹಾಡುಗಳನ್ನು ಹಾಡುತ್ತ, ತಾಳಕ್ಕೆ ತಕ್ಕ  ಕುಣಿಯುತ್ತ, ನಲಿಯುತ್ತ, ಮಾರ್ಗ ಮದ್ಯದಲ್ಲಿ ಬರುವ ಗ್ರಾಮ, ಪಟ್ಟಣಗಳ ಭಕ್ತರು, ಪಾದಯಾತ್ರಿಕರನ್ನು ಬರ ಮಾಡಿಕೊಂಡು, ಆಹ್ವಾನಿಸಿ ಭಕ್ತರು ನೀಡುವ ಆತಿಥ್ಯ ಸ್ವೀಕರಿಸಿ  ಮುಂದೆ ಸಾಗುತ್ತಾರೆ.

ದಾರಿಯಲ್ಲಿ ಸಿಗುವ ದೇವಸ್ಥಾನದಲ್ಲಿ ತಂಗಿ ರಾತ್ರಿ ಹೊತ್ತು ಕಳೆದು ಬೆಳಿಗ್ಗೆ ಮತ್ತೆ ಯಾತ್ರೆ ಪ್ರಾರಂಭಿಸಲಿದ್ದಾರೆ.

  ಭಕ್ತರು ಸಾವಿರಾರು ಕಿಲೋಮೀಟರ್‌ ನಿರಂತರ ಪಾದಯಾತ್ರೆ ಮೂಲಕ ಕ್ರಮಿಸಿ, ಶ್ರದ್ಧೆ ಭಕ್ತಿಯಿಂದ ಪಾಂಡುರಂಗನನ್ನು ಭಜಿಸುತ್ತಾ ಪಂಡರಾಪುರ ಕ್ಷೇತ್ರದಲ್ಲಿ ತಮ್ಮ ಪಾದಯಾತ್ರೆ ಯಶಸ್ವೀ ಸಮಾಪ್ತಿ ಗೊಳಿಸಲಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.