• Home  
  • ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಕುಂಭಾಭಿಷೇಕ (Kaipunjalu Gaddigebettu Babbu Swamy Daivsthana Kumbhabhisheka)
- ದೈವ - ದೇವರು

ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಕುಂಭಾಭಿಷೇಕ (Kaipunjalu Gaddigebettu Babbu Swamy Daivsthana Kumbhabhisheka)

Share: ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಕುಂಭಾಭಿಷೇಕ  ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ, ಮಹಾಅನ್ನಸಂತರ್ಪಣೆಕಾಪು, ಮೇ 3 : ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡಿರುವ ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಮೇ 2ರಂದು ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು. ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಅರ್ಚಕ ವೇ| ಮೂ| […]

ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಕುಂಭಾಭಿಷೇಕ

 ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ, ಮಹಾಅನ್ನಸಂತರ್ಪಣೆ
ಕಾಪು, ಮೇ 3 : ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡಿರುವ ಕೈಪುಂಜಾಲು ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಮೇ 2ರಂದು ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು.

ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಅರ್ಚಕ ವೇ| ಮೂ| ನಾರಾಯಣ ತಂತ್ರಿ, ವೇ| ಮೂ| ಜನಾರ್ದನ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ಪುಣ್ಯಾಹ, ನವಗ್ರಹ ಹೋಮ, ಕಲಶಪೂಜೆ, ಗೋಪೂಜೆ, ಪ್ರಧಾನ ಹೋಮ, ಪ್ರತಿಷ್ಠಾ ಹೋಮ, ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದರ್ಶನ ಸೇವೆ ಮತ್ತು ಗರ್ಭಗುಡಿ ಪ್ರವೇಶ, ದೈವಗಳ ಪ್ರತಿಷ್ಠೆ, ಅಮ್ಮನವರ ಸಾನಿಧ್ಯ ಸಂಕಲ್ಪ, ಕಲಶಾಭಿಷೇಕ, ಪ್ರಸನ್ನಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಗದ್ದಿಗೆಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ದೊಡ್ಡಣ್ಣ ಶೆಟ್ಟಿ ಬಾವುಗುತ್ತು, ಅಧ್ಯಕ್ಷ ಕಿರಣ್ ಆಳ್ವ ಬಾವುಗುತ್ತು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಸಾಲಿಯಾನ್, ರಾಜ ಕೆ. ಸುವರ್ಣ, ಕೋಶಾಧಿಕಾರಿಗಳಾದ ಶೇಖರ್ ಶೆಟ್ಟಿ, ಜಯಕರ ಪೂಜಾರಿ, ಸದಾನಂದ ಕೈಪುಂಜಾಲು, ಕ್ಷೇತ್ರದ ಅರ್ಚಕ ವಿಜಯ್ ಮುಕ್ಕಾಲ್ತಿ, ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಅರುಣ್ ಆಳ್ವ ಬಾವುಗುತ್ತು, ದಯಾನಂದ್ ಶೆಟ್ಟಿ ಬಾವುಗುತ್ತು, ಸುರೇಂದ್ರ ಶೆಟ್ಟಿ ಬಾವುಗುತ್ತು, ಡಾ| ಶಿಶಿರ್ ಶೆಟ್ಟಿ ಬಾವುಗುತ್ತು, ನವೀನ್ ಆಳ್ವ ಬಾವುಗುತ್ತು, ಕೀರ್ತನ್ ಆಳ್ವ ಬಾವುಗುತ್ತು, ಶ್ರೀಕರ ಶೆಟ್ಟಿ ಕಲ್ಯ, ಉದಯ ಪೂಜಾರಿ, ಜಗದೀಶ್ ಬಂಗೇರ, ಪ್ರವೀಣ್ ಕುಂದರ್, ಪ್ರವೀಣ್ ಶ್ರೀಯಾನ್, ಸರ್ವೋತ್ತಮ ಕುಂದರ್, ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಪ್ರಮೋದ್ ಪೂಜಾರಿ, ಶಶಿಧರ್ ಸುವರ್ಣ, ಪ್ರಭಾಕರ ಪೂಜಾರಿ, ಚಂದ್ರಶೇಖರ ಅಮೀನ್, ಸೂರ್ಯ ನಾರಾಯಣ್, ರಮೇಶ್ ಪೂಜಾರಿ, ಪ್ರವೀಣ್ ಪೂಜಾರಿ, ನರೇಶ್ ಮೆಂಡನ್, ಇಂಜಿನಿಯರ್ ರಾಘವೇಂದ್ರ ಆಚಾರ್ಯ, ಶಿವ ಗುರಿಕಾರ, ರಾಮ ಗುರಿಕಾರ, ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗುರಿಕಾರರು, ಹತ್ತು ಸಮಸ್ತರು ಹಾಗೂ ಸಮಾಜ ಭಾಂದವರು, ಊರ ಪರವೂರ ಭಗದ್ಭಕ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.