• Home  
  • ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ (State Levet Cricket match Tounment starts at Hejamady)
- ಕರಾವಳಿ - ಕ್ರೀಡೆ

ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ (State Levet Cricket match Tounment starts at Hejamady)

Share: ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ (Hejamady) ಹೆಜಮಾಡಿ: ಹೆಜಮಾಡಿಯ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ದುರ್ಗಾ ಪ್ರೀಮಿಯರ್ ಲೀಗ್-2 ಇದರ ಎಲ್.ವಿ.ಎ. ಸ್ಮಾರಕ ಟ್ರೋಫಿ-20024 ಪಂದ್ಯಾಟಕ್ಕೆ ಉದ್ಯಮಿ ಸೂರಜ್ ಶೆಟ್ಟಿ ಚಾಲನೆ ನೀಡಿದರು. ನಿರಂತರ 3 ದಿನಗಳ ಕಾಲ ಲೀಗ್ ಮಾದರಿಯಲ್ಲಿ ಲೋಕೇಶ್ ಸುವರ್ಣ, ವಿಶಾಲ್ ದೇವಾಡಿಗ ಮತ್ತು ಅನಿತ್ ದೇವಾಡಿಗ ಸ್ಮರಣಾರ್ಥ ನಡೆಯುವ ಪಂದ್ಯಾಟದಲ್ಲಿ 10 ಆಯ್ದ ತಂಡಗಳು […]

ಹೆಜಮಾಡಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

(Hejamady) ಹೆಜಮಾಡಿ: ಹೆಜಮಾಡಿಯ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ಹೆಜಮಾಡಿ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ದುರ್ಗಾ ಪ್ರೀಮಿಯರ್ ಲೀಗ್-2 ಇದರ ಎಲ್.ವಿ.ಎ. ಸ್ಮಾರಕ ಟ್ರೋಫಿ-20024 ಪಂದ್ಯಾಟಕ್ಕೆ ಉದ್ಯಮಿ ಸೂರಜ್ ಶೆಟ್ಟಿ ಚಾಲನೆ ನೀಡಿದರು.

ನಿರಂತರ 3 ದಿನಗಳ ಕಾಲ ಲೀಗ್ ಮಾದರಿಯಲ್ಲಿ ಲೋಕೇಶ್ ಸುವರ್ಣ, ವಿಶಾಲ್ ದೇವಾಡಿಗ ಮತ್ತು ಅನಿತ್ ದೇವಾಡಿಗ ಸ್ಮರಣಾರ್ಥ ನಡೆಯುವ ಪಂದ್ಯಾಟದಲ್ಲಿ 10 ಆಯ್ದ ತಂಡಗಳು ಸ್ಪರ್ಧಿಸಲಿದ್ದು, ವಿಜೇತರಿಗೆ ನಗದು ಸಹಿತ ಪ್ರಶಸ್ತಿ ಲಭಿಸಲಿದೆ.

ಸಮಾರಂಭದ ಮುಖ್ಯ ಅತಿಥಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾಪು ತಾಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ ಸೂಡ ಮಾತನಾಡಿ, ತಾಲೂಕಿನ ಅತೀ ದೊಡ್ಡ ಕ್ರೀಡಾಂಗಣವಾದ ಹೆಜಮಾಡಿ ಕ್ರೀಡಾಂಗಣವನ್ನು ಸುವ್ಯಸ್ಥಿತವಾಗಿ ಆಧುನೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಪ್ರಭಾಕರ ಬಿ. ಕರ್ಕೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಕೆ.ಪಿ.ಸಿ.ಸಿ. ಕೋರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಸಚಿನ್ ಜಿ.ನಾಯಕ್, ಪಡುಬಿದ್ರಿ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಹೇಮಾನಂದ ಪುತ್ರನ್ ಹೆಜಮಾಡಿ, ಕೋಡಿ ಕ್ರಿಕೆಟರ್ಸ್‌  ಸಂಚಾಲಕ ಸತೀಶ್ ಕೋಟ್ಯಾನ್, ಪುಷ್ಪರಾಜ್ ಶೆಟ್ಟಿ ಹೆಜ್ಮಾಡಿ, ಹಿತೇಶ್ ಮೆಂಡನ್, ಜನಾರ್ಧನ ಪೂಜಾರಿ ಕಾರ್ನಾಡು, ಪ್ರತಾಪ್ ಪುತ್ರನ್, ಮೋಹನ್ ಕೋಟ್ಯಾನ್, ಹರೀಶ್ ಮಸ್ಕತ್, ಶ್ರೀಧರ್, ಕರುಣಾಕರ ಪೂಜಾರಿ, ರಂಜಿತ್ ದೇವಾಡಿಗ, ದುರ್ಗಾ ಫ್ರೆಂಡ್ಸ್ ಮಾಜಿ ಅಧ್ಯಕ್ಷ ರವಿ ಎಚ್. ಕುಂದರ್, ಗೌರವಾಧ್ಯಕ್ಷ ದೇವದಾಸ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು.

ವಿನಯ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.