• Home  
  • ಕೋಟತಟ್ಟು ಪಡುಕರೆ ಎಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ (Acres of agricultural land are on fire)
- ಅಪರಾಧ

ಕೋಟತಟ್ಟು ಪಡುಕರೆ ಎಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ (Acres of agricultural land are on fire)

Share: ಕೋಟತಟ್ಟು ಪಡುಕರೆ ಎಕ್ಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ (Kota) ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ಹೊಂದಿದ ಪ್ರದೇಶದಲ್ಲಿ ನೂರಾರು ಎಕ್ಕರೆ ಕೃಷಿ  ಭೂಮಿ ಹಾಗೂ ಉಪ್ಪು ನೀರಿನ ಹೊಳೆ ಭಾಗದಲ್ಲಿರುವ ಸಾಕಷ್ಟು ಮರಗಿಡಗಳು ಬೆಂಕಿಗಾಹುತಿ ಪಡೆದಿವೆ. ಮಂಗಳವಾರ ಕೋಟತಟ್ಟು ಪಡುಕರೆ ರಾಮ ಮಂದಿರ ಸಮೀಪದಿಂದ ಹೊತ್ತಿ ಉರಿದ ಬೆಂಕಿ ಕೋಟತಟ್ಟು ಐಸೆಂಟ್ಸ್ ಭಾಗದವರೆಗೆ ಆಕ್ರಮಿಸಿಕೊಂಡು ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಕೃಷಿ ಭೂಮಿಯವರೆಗೆ ಕ್ರಮಿಸಿಕೊಂಡಿತು. ಸ್ಥಳೀಯ ಕೋಟತಟ್ಟು ಗ್ರಾಮಪಂಚಾಯತ್ […]

ಕೋಟತಟ್ಟು ಪಡುಕರೆ ಎಕ್ಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ

(Kota) ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ಹೊಂದಿದ ಪ್ರದೇಶದಲ್ಲಿ ನೂರಾರು ಎಕ್ಕರೆ ಕೃಷಿ  ಭೂಮಿ ಹಾಗೂ ಉಪ್ಪು ನೀರಿನ ಹೊಳೆ ಭಾಗದಲ್ಲಿರುವ ಸಾಕಷ್ಟು ಮರಗಿಡಗಳು ಬೆಂಕಿಗಾಹುತಿ ಪಡೆದಿವೆ.

ಮಂಗಳವಾರ ಕೋಟತಟ್ಟು ಪಡುಕರೆ ರಾಮ ಮಂದಿರ ಸಮೀಪದಿಂದ ಹೊತ್ತಿ ಉರಿದ ಬೆಂಕಿ ಕೋಟತಟ್ಟು ಐಸೆಂಟ್ಸ್ ಭಾಗದವರೆಗೆ ಆಕ್ರಮಿಸಿಕೊಂಡು ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಕೃಷಿ ಭೂಮಿಯವರೆಗೆ ಕ್ರಮಿಸಿಕೊಂಡಿತು.

ಸ್ಥಳೀಯ ಕೋಟತಟ್ಟು ಗ್ರಾಮಪಂಚಾಯತ್ ಪಡುಕರೆ ಭಾಗದ ಸದಸ್ಯ ರವೀಂದ್ರ ತಿಂಗಳಾಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸುದರೊಳಗೆ ಸ್ಥಳೀಯರು ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಇದರಿಂದ ಸುತ್ತಮುತ್ತಲಿನ ಸ್ಥಳೀಯ ಮನೆಗಳು ಹಾನಿಯಿಂದ ಪಾರಾಗಿವೆ.

ದೌಡಾಯಿಸಿದ ಅಗ್ನಿಶಾಮಕದಳ

ಸ್ಥಳಕ್ಕೆ ಕುಂದಾಪುರದ ಅಗ್ನಿ ಶಾಮಕದಳ ಭೇಟಿ ನೀಡಿ ಪರೀಶಿಲಿಸಿತು. ಇದಕ್ಕಿಂತ ಮೊದಲೆ ಗ್ರಾಮಸ್ಥರು ಸೀತಾನದಿಯ ನೀರನ್ನು ಪಾತ್ರೆಗಳ ಸಹಕಾರದೊಂದಿಗೆ ಬೆಂಕಿ ನಂದಿಸಲು ಮುಂದಾದರು. ಇದರಿಂದ ಭಾರಿ ಅನಾಹುತವೊಂದು ತಪ್ಪಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.