ಕೋಟ: ಮತ ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದ ಅಜ್ಜಿ
(Kota) ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೋರ್ವರು ಮನೆಯಲ್ಲೇ ಮತದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದ ಶ್ಯಾನುಭೋಗರ ಮನೆಯಲ್ಲಿ ಸಂಭವಿಸಿದೆ.
ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ. ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) (Yashoda Narayana Upadhya)ಮೃತಪಟ್ಟವರು.
ವಯೋವೃದ್ಧರು, ವಿಕಲಾಂಗರು ಹಾಗೂ ಏ. 26 ರಂದು ನಡೆಯಲಿರುವ ಚುನಾವಣೆಯಂದು ಮತದಾನ ಮಾಡಲು ಅಸಾಧ್ಯವಾದವರನ್ನು ಜಿಲ್ಲಾಡಳಿತ ಗುರುತಿಸಿ, ಅವರ ಮನೆಗೆ ಹೋಗಿ ಮತದಾನ ಮಾಡಿಸಲಾಗಿದೆ.
ಅವರಿಗೆ ಸಣ್ಣ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಹಿರಿಯ ನಾಗರೀಕರ ಕಾರ್ಯಕ್ರಮದಡಿ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಆದ್ದರಿಂದ ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು ಎಂದು ಹೇಳಿದ್ದರಂತೆ.
ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಅನಾರೋಗ್ಯ ಉಲ್ಬಣಗೊಂಡು ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು.
ಮೃತರು ಪುತ್ರ, ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.

