• Home  
  • ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ (Protest against chaos at Kota Community Health Center)
- protest

ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ (Protest against chaos at Kota Community Health Center)

Share: ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ   ಹೆರಿಗೆ ತಜ್ಞರನ್ನು, ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರದ ಆರೋಪ   (Kota) ಕೋಟ: ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆ ತಜ್ಞರನ್ನು ಸೇರಿದಂತೆ ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರದ ರಾಜ್ಯ ಸರಕಾರದ ನಿಲುವಿನ ವಿರುದ್ಧ ಕೋಟ ಸಮುದಾಯ ಆರೋಗ್ಯ ಕೇಂದ್ರದ ಎದುರು ಕೋಟದ ಸಮಸ್ತ ನಾಗರಿಕರಿಂದ  ಬೃಹತ್ ಪ್ರತಿಭಟನೆ ಮಂಗಳವಾರ ನಡೆಯಿತು.  ಕೋಟ ಮಹತೋಭಾರ ಹಿರೇ ಮಹಾಲಿಂಗೇಶ್ವರ ದೇಗುಲದಲ್ಲಿ ಕೋಟ ಗ್ರಾಮ ಪಂಚಾಯತ್ […]

  (Kota) ಕೋಟ: ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆ ತಜ್ಞರನ್ನು ಸೇರಿದಂತೆ ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರದ ರಾಜ್ಯ ಸರಕಾರದ ನಿಲುವಿನ ವಿರುದ್ಧ ಕೋಟ ಸಮುದಾಯ ಆರೋಗ್ಯ ಕೇಂದ್ರದ ಎದುರು ಕೋಟದ ಸಮಸ್ತ ನಾಗರಿಕರಿಂದ  ಬೃಹತ್ ಪ್ರತಿಭಟನೆ ಮಂಗಳವಾರ ನಡೆಯಿತು.

 ಕೋಟ ಮಹತೋಭಾರ ಹಿರೇ ಮಹಾಲಿಂಗೇಶ್ವರ ದೇಗುಲದಲ್ಲಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಪ್ರತಿಭಟನೆಗೆ ಚಾಲನೆ ನೀಡಿದರು. ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿ ಸರಕಾರ ವಿರುದ್ಧ ಘೋಷಣೆ ಕೂಗಿದರು.

 ಜ್ಯೋತಿ ಭರತ್ ಕುಮಾರ್ ಶೆಟ್ಟಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಹಳ್ಳಿ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದೂರದ ಊರಿನ ರೋಗಿಗಳು ಸಹ ಇಲ್ಲಿ ಬಂದು ಪ್ರಯೋಜನ ಪಡೆಯುತ್ತಿದ್ದಾರೆ. ಕೋಟ ಗ್ರಾಮ ಪಂಚಾಯತ್ ಈ ಆಸ್ಪತ್ರೆಗೆ ಬೇಕಾದ ಸಹಕಾರವನ್ನು ನೀಡುತ್ತಿದ್ದು, ರಾಜ್ಯ ಸರಕಾರ ಕೈಗೊಂಡ ಈ ನಿಲುವಿನಿಂದ ಗ್ರಾಮೀಣ ಹಳ್ಳಿ ಜನರಿಗೆ ತೊಂದರೆ ಆಗುತ್ತಿದೆ. ಸರಕಾರ ಈ ಆದೇಶ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸಭೆಯ ಸಂಯೋಜಕ ದಿನೇಶ್ ಗಾಣಿಗ ಮಾತನಾಡಿ, ರಾಜ್ಯ ಸರಕಾರ ಸಮಯದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದನ್ನು ಬಿಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಲಿಗೆ ಸೇರಿಸುವ ಹುನ್ನಾರದ ವಿರುದ್ಧ ಕಿಡಿಕಾರಿದರು.

ಅಲ್ಲದೆ ಶೀಘ್ರದಲ್ಲಿ ಈ ಆದೇಶ ವಾಪಾಸ್ ಪಡೆಯಿರಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ದೊಡ್ಡ ರೀತಿಯಲ್ಲಿ ಜನ ಸಿಡಿದೇಳಲಿದ್ದಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆ ಪ್ರಾರಂಭಗೊಂಡು ಮೂರು ತಾಸಿನ ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು  ವಿರುದ್ಧ ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಪೂಜಾರಿ ಸೇರಿದಂತೆ ಹಲವು ಪ್ರತಿಭಟನಾಕಾರರು ಹರಿಹಾಯ್ದರು. ಡಿಎಚ್ ಓ  ಏಕೆ ಪ್ರತಿಭಟನೆ ಮಾಡುತ್ತಿದೀರಿ. ವೈದ್ಯರನ್ನು ಬೇರೆಡೆ ಸ್ಥಳಾಂತರಿಸುವ ಆದೇಶ ನಿಮ್ಮಲ್ಲಿ‌ದೆಯಾ ಎಂದು ಖಾರವಾಗಿ ಪ್ರತಿಭಟನಾಕಾರರನ್ನು ಪ್ರಶ್ನಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ನಿಮಗೆ ಪ್ರತಿಭಟನಾ ಸ್ಥಳಕ್ಕೆ ಬರುವುದಕ್ಕೆ ಸಮಯ ನೀಡಿದ್ದೇವೆ. ಆದರೆ ವಿಳಂಬವಾಗಿ ಬಂದಿದ್ದಿರಿ ಇದು ಎಷ್ಟು ಸರಿ. ಜನರ ತಾಳ್ಮೆ ಪರೀಕ್ಷಿಸಬೇಡಿ. ಹೆರಿಗೆ ವೈದ್ಯರನ್ನು ಇಲ್ಲಿಂದ ಸ್ಥಳಾಂತರಿಸುವ ಸರಕಾರಕ್ಕೆ ನಿಮ್ಮ ವರದಿ ನೀಡಿ ಇಲ್ಲಿಂದ ಯಾವ ವೈದ್ಯರನ್ನು ಸ್ಥಳಾಂತರಿಸದಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

 ಪ್ರತಿಭಟನೆ ಅವಶ್ಯಕತೆ ಇರುವುದಿಲ್ಲ. ಸರಕಾರ ಇನ್ನೂ  ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಧಿಕೃತ ಆದೇಶ ನೀಡಿಲ್ಲ. ಇಲ್ಲಿ ಹೆರಿಗೆ, ಮಕ್ಕಳ ತಜ್ಞ, ಅರವಳಿಕೆ ತಜ್ಞರನ್ನು ಬೇರೆಡೆಗೆ ವರ್ಗಾವಣೆ ನಮ್ಮ ಮುಂದಿಲ್ಲ. ಇದ್ದರೂ ಅವರ ಜಾಗಕ್ಕೆ  ಬೇರೆಯವರನ್ನು ಹಾಕಲಾಗುತ್ತದೆ. ಆರೋಗ್ಯ ಇಲಾಖೆ ಜನರ ಪರವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು ಎಂದು ಉತ್ತರಿಸಿದರು.

   ಪ್ರತಿಭಟನಾ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ರಾಜು ಬೆಟ್ಟಿನಮನೆ, ಶಾಮಣ್ಣ ತೆಕ್ಕಟ್ಟೆ, ಟಿ. ಮಂಜುನಾಥ್ ಗಿಳಿಯಾರು, ಕೋಟ ಪಂಚಾಯತ್ ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್, ಕೋಟ ಸಿ. ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ  ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಕೆ.ವಿ ರಮೇಶ್ ರಾವ್  ಮಾತನಾಡಿದರು.

   ಪ್ರಮುಖರಾದ ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್, ಮಾಜಿ ತಾ.ಪಂ ಸದಸ್ಯೆ ಲಲಿತಾ, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ವನೀತಾ ಎಸ್ ಆಚಾರ್, ತಿಮ್ಮ ಕಾಂಚನ್, ಪ್ರಸಾದ್ ಬಿಲ್ಲವ, ಸುರೇಶ್ ಗಿಳಿಯಾರು, ಅಜಿತ್ ಶೆಟ್ಟಿ ವಡ್ಡರ್ಸೆ, ಸುರೇಶ್ ಸಮತಾ, ಕುಮಾರ್ ಕೋಟ, ರತ್ನಾಕರ್ ಬಾರಿಕೆರೆ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.