• Home  
  • ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿಯವರ   ‘ಪಂಜುರ್ಲಿ’ಕೃತಿ ಬಿಡುಗಡೆ (Journalist Prakash Suvarna Katapady’s book ‘Panjurli’ released)
- ಪುಸ್ತಕ ಬಿಡುಗಡೆ

ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿಯವರ   ‘ಪಂಜುರ್ಲಿ’ಕೃತಿ ಬಿಡುಗಡೆ (Journalist Prakash Suvarna Katapady’s book ‘Panjurli’ released)

Share: ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿಯವರ  ‘ಪಂಜುರ್ಲಿ’ಕೃತಿ ಬಿಡುಗಡೆ ಪಾಣೆ ಮಂಗಳೂರಿನ ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮ (Mangaluru) ಮಂಗಳೂರು: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದಿರುವ ‘ಪಂಜುರ್ಲಿ’ಕೃತಿಯನ್ನು ಬಿಡುಗಡೆ ಮಾಡಲಾಯಿತು.     ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆ ಗೊಳಿಸಿದರು.     ತುಳುನಾಡಿನ […]

(Mangaluru) ಮಂಗಳೂರು: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದಿರುವ ‘ಪಂಜುರ್ಲಿ’ಕೃತಿಯನ್ನು ಬಿಡುಗಡೆ ಮಾಡಲಾಯಿತು.

    ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆ ಗೊಳಿಸಿದರು.

    ತುಳುನಾಡಿನ ಪ್ರಾಚೀನ ದೈವ ಪಂಜುರ್ಲಿಯ ಕುರಿತು ಪ್ರಕಾಶ ಸುವರ್ಣ ಕಟಪಾಡಿ ಅವರು ಅಧ್ಯಯನ ನಡೆಸಿ ಬರೆದಿರುವ ಪಂಜುರ್ಲಿ ಕೃತಿ ಮೌಲ್ಯಯುತವಾಗಿದ್ದು, ಈ ಕೃತಿ ಯುವಪೀಳಿಗೆಗೆ ದೈವಾರಾಧನೆಯ ಕುರಿತು ಸ್ಪಷ್ಟ ಚಿತ್ರಣ ನೀಡಲಿದೆ ಎಂದರು.

    ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ರಘುನಾಥ್ ಸೋಮಯಾಜಿ, ಮೂಡುಬಿದ್ರಿ ಉದ್ಯಮಿ ಶ್ರೀಪತಿ ಭಟ್, ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ತೇವು ತಾರನಾಥ ಕೊಟ್ಟಾರಿ, ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ, ಡಾ. ಶಾಂತಾ ಪುತ್ತೂರು, ಡಾ. ಜೋಸೆಫ್ ಲೋಬೊ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನೀಮಾ ಲೋಬೊ, ಪದ್ಮನಾಭ ಆರ್ ಕೋಟ್ಯಾನ್, ದೇವಕಿ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.

   ಮಂಗಳೂರಿನ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ. ಪ್ರದೀಪ್ ಕುಮಾರ್ ಪ್ರಸ್ತಾವನೆಗೈದರು. ಪುರುಷೋತ್ತಮ ಕೊಟ್ಟಾರಿ ಸ್ವಾಗತಿಸಿದರು. ಶೋಭಾ ದಿನೇಶ್ ಉದ್ಯಾವರ ಮತ್ತು ಸನ್ಮತಿ ಇಂದ್ರ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.