• Home  
  • ಕೋಡಿ : ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮಹಾಸಭೆ, ಸನ್ಮಾನ, ವಿದ್ಯಾರ್ಥಿವೇತನ (Kodi: Fisherman socityʼs annual general meeting)
- ಸಂಘ, ಸಂಸ್ಥೆಗಳು

ಕೋಡಿ : ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮಹಾಸಭೆ, ಸನ್ಮಾನ, ವಿದ್ಯಾರ್ಥಿವೇತನ (Kodi: Fisherman socityʼs annual general meeting)

Share: ಕೋಡಿ : ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮಹಾಸಭೆ, ಸನ್ಮಾನ, ವಿದ್ಯಾರ್ಥಿವೇತನ  ಕೋಟ: ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ಮಹಾಸಭೆ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಇಲ್ಲಿ ಜರುಗಿತು. ಸಂಘದಲ್ಲಿ ಒಟ್ಟು 5233 ಜನ ಸದಸ್ಯರಿದ್ದು , 29 ಲಕ್ಷಕ್ಕೂ ಮಿಕ್ಕಿ ಪಾಲು ಬಂಡವಾಳ ಹೊಂದಿದ್ದು, ರೂ 11,85,251.77 ಲಾಭ ಗಳಿಸಿದೆ ಸಂಘದ ಕಾರ್ಯದರ್ಶಿ ಅಕ್ಷಯ ಕುಂದರ್ ತಮ್ಮ ವರದಿಯಲ್ಲಿ ತಿಳಿಸಿದರು. ಸಂಘದ ಅಧ್ಯಕ್ಷ ಅಶೋಕ […]

ಕೋಡಿ : ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮಹಾಸಭೆ, ಸನ್ಮಾನ, ವಿದ್ಯಾರ್ಥಿವೇತನ

 ಕೋಟ: ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ಮಹಾಸಭೆ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಇಲ್ಲಿ ಜರುಗಿತು.

ಸಂಘದಲ್ಲಿ ಒಟ್ಟು 5233 ಜನ ಸದಸ್ಯರಿದ್ದು , 29 ಲಕ್ಷಕ್ಕೂ ಮಿಕ್ಕಿ ಪಾಲು ಬಂಡವಾಳ ಹೊಂದಿದ್ದು, ರೂ 11,85,251.77 ಲಾಭ ಗಳಿಸಿದೆ ಸಂಘದ ಕಾರ್ಯದರ್ಶಿ ಅಕ್ಷಯ ಕುಂದರ್ ತಮ್ಮ ವರದಿಯಲ್ಲಿ ತಿಳಿಸಿದರು.

ಸಂಘದ ಅಧ್ಯಕ್ಷ ಅಶೋಕ ತಿಂಗಳಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಹಿರಿಯ ಮೀನುಗಾರರಾದ ನರಸಿಂಹ ಖಾರ್ವಿ ಇವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಸಂಸ್ಥೆಯ ಉಪಾಧ್ಯಕ್ಷ ಉದಯ್ ಕಾಂಚನ್‌ರವರು ಶೇಕಡಾ 12% ಡಿವಿಡೆಂಟ್ ಘೋಷಣೆ ಮಾಡಿದರು.

59 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

 ನಿರ್ದೇಶಕರಾದ ಲಕ್ಷ್ಮಣ ಬಿ.ಸುವರ್ಣ ,ಜಗನ್ನಾಥ ಬಂಗೇರ, ಚಂದ್ರ ಕಾಂಚನ್, ಜೆರೋಮ್ ರೊಡ್ರಿಗಸ್, ಅಣ್ಣಪ್ಪ ಕುಂದರ್, ಪ್ರಭಾಕರ್ ಮೆಂಡನ್, ಸುಧೀರ ಕುಂದರ್, ತಾರಾ, ತುಳಸಿ, ಪ್ರೆಸಿಲ್ಲಾ, ಪಲ್ಲವಿ, ಮಂಜುನಾಥ್ ಖಾರ್ವಿ, ಮಹೇಶ್ ಬಂಗೇರ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.